Breaking News

ಕಾಸಿಗಾಗಿ ಸಹಪಾಠಿಯ ಕಿಡ್ನಾಪ್ – ನಾಲ್ವರು ವಿದ್ಯಾರ್ಥಿಗಳು ಅರೆಸ್ಟ್

ಬೆಂಗಳೂರು : ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಸ್ಟೂಡೆಂಟ್ಸ್ ಕಿಡ್ನಾಪ್ ಕೇಸ್ ಬೇಧಿಸುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ. ಖಾಸಗಿ ಕಾಲೇಜು ವಿದ್ಯಾರ್ಥಿಗಳ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ವಿದ್ಯಾರ್ಥಿಗಳನ್ನು ಇದೀಗ ಮಡಿವಾಳ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಣಕ್ಕಾಗಿ ಸಹಪಾಠಿಯನ್ನು ಕಿಡ್ನಾಪ್ ಮಾಡಿದ್ದಾಗಿ ಬಂಧಿತರು ತಪ್ಪು ಒಪ್ಪಿಕೊಂಡಿದ್ದಾರೆ. ಸದ್ಯ ಮಡಿವಾಳ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಆದಿತ್ಯ ಭೋಸ್ಲೆ, ಶೌರ್ಯ ಅಗರ್ವಾಲ್, ನಿಕ್ಕು ಸುಲ್ತಾನಿಯ ಹಾಗು ಸಯ್ಯದ್ ಮೊಹಮ್ಮದ್ ಬಿಲಾಲ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಕಿಡ್ನ್ಯಾಪ್ ಮಾಡಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಹೊಯ್ಸಳ ಪೊಲೀಸರಿಗೆ ಕಿಡ್ನಾಪ್ ಆಗಿದ್ದ ವಿದ್ಯಾರ್ಥಿಗಳಿಗಳ ಸ್ನೇಹಿತ ಕರೆ ಮಾಡಿದ್ದನು. ತಾಂತ್ರಿಕ ಪುರಾವೆ ಗಳ ಆಧರಿಸಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *