ಬೆಂಗಳೂರು:ಘನತ್ಯಾಜ್ಯ ನಿರ್ವಹಣಾ ವಿಭಾಗದಿಂದ ಗೋವಿಂದರಾಜನಗರ ಕ್ಷೇತ್ರದ ವಾರ್ಡ್ ಸಂಖ್ಯೆ 126ರ ಮಾರುತಿ ಮಂದಿರ ಪ್ರದೇಶದಲ್ಲಿ ಅಕ್ರಮವಾಗಿ ಏಕಬಳಕೆ ಪ್ಲಾಸ್ಟಿಕ್ ಸಂಗ್ರಹಣೆ ಮತ್ತು ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗೆ 2 ಲಕ್ಷ ರೂ ದಂಡ ವಿಧಿಸಲಾಗಿದೆ. ಪರಿಶೀಲನೆಯ ವೇಳೆ ಬಾಲಾಜಿ ಪಾಲಿ ಪ್ಯಾಕ್ (ಪ್ಲಾಸ್ಟಿಕ್ ವ್ಯಾಪಾರಿ) ಅವರು ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಅಕ್ರಮ ಸಂಗ್ರಹಣೆ ಮತ್ತು ವ್ಯಾಪಾರ ನಡೆಸುತ್ತಿರುವುದು ಪತ್ತೆಯಾಗಿದೆ. ಪ್ಲಾಸ್ಟಿಕ್ ವ್ಯಾಪಾರವನ್ನು ನಾಗರಭಾವಿ ಮುಖ್ಯ ರಸ್ತೆಯಲ್ಲಿ ನಡೆಸಲಾಗುತ್ತಿದ್ದು, ಮೂಡಲಪಾಳ್ಯ, ಅನುಭವನಗರದ 2ನೇ ಕ್ರಾಸ್ ನಲ್ಲಿರುವ ವಾಸಸ್ಥಳ ಕಟ್ಟಡದಲ್ಲಿ ಗೋದಾಮು ಇಟ್ಟುಕೊಂಡಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

