Breaking News

ಎಪಿಕೆ ಫೈಲ್ ಡೌನ್‌ಲೋಡ್: 4,86,13.74ರೂ. ಮಾಯ

ಉಡುಪಿ: ವಾಟ್ಸಪ್‌ನಲ್ಲಿ ಬಂದ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದ ವ್ಯಕ್ತಿ ಬರೋಬ್ಬರಿ 4,86,13 ರೂ. ಕಳೆದುಕೊಂಡ ಘಟನೆ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಬ್ದುಲ್ ಹಮೀದ್ ಎಂಬವರು ಪಡುಬಿದ್ರಿ ಹೆಜಮಾಡಿ ಬ್ರಾಂಚ್ ನ ಕೆನರಾ ಬ್ಯಾಂಕ್ ಮತ್ತು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಬ್ರಾಂಚ್ ನಲ್ಲಿ ಖಾತೆ ಹೊಂದಿದ್ದರು. ಎ.12ರಂದು ಬೆಳಗ್ಗೆ 7ಕ್ಕೆ ಅವರ ಪರಿಚಯದ ಕುಮಾರ ಸ್ವಾಮಿ ಎಂಬವರ ಮೊಬೈಲ್ ಸಂಖ್ಯೆಯಿಂದ ವಾಟ್ಸಪ್ ಮೂಲಕ ಆರ್‌ಟಿಒ ಚಲನ್ ಇ-ಕೋರ್ಟ್ ನೋಟಿಫಿಕೇಶನ್ ಎಂಬ ಎಪಿಕೆ ಫೈಲ್ ಬಂದಿತ್ತು. ಇದನ್ನು ಡೌನ್‌ಲೋಡ್‌ ಮಾಡಿದ ಬಳಿಕ ಎ.13ರಂದು ಹಂತ ಹಂತವಾಗಿ ಒಟ್ಟು 4,86,13.74ರೂ. ಕಡಿತವಾಗಿದೆ. ಅಬ್ದುಲ್ ಹಮೀದ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಸೆನ್‌ ಅಪರಾಧ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *