ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕಾರ್ಯಕ್ಷಮತೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದ ಯುವತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ಇದು ಜಾಗರೂಕ ಮತ್ತು ವಿದ್ಯಾವಂತ ನಾಗರಿಕರ ಲಕ್ಷಣ” ಎಂದು ಹಲವರು ವಿಡಿಯೋವನ್ನು ಮೆಚ್ಚಿದ್ದಾರೆ. ಜನಪ್ರತಿನಿಧಿಗಳ ಕೆಲಸವನ್ನು ಪ್ರಶ್ನಿಸುವುದು ಹಾಗೂ ಮಾಹಿತಿ ಪರಿಶೀಲಿಸುವುದು ಪ್ರಜೆಗಳ ಹಕ್ಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ರಸ್ತೆ ಮತ್ತು ಸ್ಥಳೀಯ ಕಾಮಗಾರಿಗಳು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರ ವ್ಯಾಪ್ತಿಗೆ ಸೇರಿದ್ದು, ಎಂಪಿ ಅಥವಾ ಕೇಂದ್ರ ಸಚಿವರ ಜವಾಬ್ದಾರಿ ಅಲ್ಲ ಎಂಬ ವಾದವನ್ನೂ ಅನೇಕರು ಮುಂದಿಟ್ಟಿದ್ದಾರೆ. ಇನ್ನೂ ಕೆಲವರು ರಾಜ್ಯ ಸರ್ಕಾರದ ಸಚಿವರ ಕೆಲಸಗಳನ್ನೂ ಇದೇ ರೀತಿ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದು, ಮತ್ತಷ್ಟು ಮಂದಿ ಇದು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯಲು ಮಾಡಿದ ವಿಡಿಯೋ ಎಂದು ಟೀಕಿಸಿದ್ದಾರೆ. ಒಟ್ಟಾರೆ ಈ ವಿಡಿಯೋ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

