Breaking News

ಸಂಕದಡಿ ಟಿಪ್ಪರ್‌ ಲಾರಿ ಚಾಲಕ ಸಾವಿಗೀಡಾದ ಘಟನೆ : ಮುಂದುವರಿದ ನಿಗೂಢತೆ

ಕಾಸರಗೋಡು: ಪೊಯಿನಾಚಿ ಸಮೀಪದ ಮಂಡಲಿಪಾರ ಞಾಣಿಕಡವು ರಸ್ತೆಯ ಸಂಕದ ಅಡಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಟಿಪ್ಪರ್‌ ಲಾರಿ ಚಾಲಕ ಬೆಂಡಿಚ್ಚಾಲ್‌ ಮಂಡಲಿಪ್ಪಾರ ನಿವಾಸಿ ಅಬ್ದುಲ್‌ ಕಬೀರ್‌ (40) ಸಾವಿನ ಹಿಂದಿನ ನಿಗೂಢತೆ ಇನ್ನೂ ಮುಂದುವರಿದಿದೆ. ಅಂದು ಅಲ್ಲೇ ಪಕ್ಕದ ತೋಟದಿಂದ ತೆಂಗಿನಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ಮೃತದೇಹವನ್ನು ಮೊದಲು ಕಂಡಿದ್ದರು. ಈ ಬಗ್ಗೆ ಮಾಹಿತಿ ಲಭಿಸಿದ ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮಹಜರು ನಡೆಸಿದ ಬಳಿಕ ಕಣ್ಣೂರು ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅಬ್ದುಲ್‌ ಕಬೀರ್‌ ಅವರ ಮೃತದೇಹ ಪತ್ತೆಯಾಗುವ ಸಂದರ್ಭದಲ್ಲಿ ಸೊಂಟದ ಕೆಳ ಭಾಗದಲ್ಲಿ ಬಟ್ಟೆ ಇರಲಿಲ್ಲವೆನ್ನಲಾಗಿದೆ. ಅಲ್ಲದೆ ಒಳ ಉಡುಪು ಅಲ್ಲೇ ಸಮೀಪದಲ್ಲಿ ಹಾಗು ಪ್ಯಾಂಟ್‌ನ್ನು ಮೃತದೇಹದ ತಲೆಯ ಅಡಿಭಾಗದಲ್ಲಿ ಇರಿಸಿದ ಸ್ಥಿತಿಯಲ್ಲಿತ್ತು. ಅಲ್ಲದೆ ಪಾದರಕ್ಷೆ ಹಾಗು ಮೊಬೈಲ್‌ ಫೋನ್‌ ಸಮೀಪದಿಂದ ಪೊಲೀಸರು ಪತ್ತೆಹಚ್ಚಿದ್ದರು. ಫೋನ್‌ ಸ್ವಿಚ್‌ ಆಫ್‌ ಆಗಿತ್ತು.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *