Breaking News

ಮಹಾರಾಷ್ಟ್ರ| 5 ಕೋಟಿ.ರೂ. ಮೌಲ್ಯದ ಎಂಡಿಎಂಎ ಮಾತ್ರೆ ವಶ; ಮಹಿಳೆಯ ಬಂಧನ

ಕಲ್ಯಾಣ್ ಎ. 20: ಮಹಾರಾಷ್ಟ್ರದ ಕಲ್ಯಾಣ್ ತಾಲೂಕು ಪೊಲೀಸರ ನೆರವಿನೊಂದಿಗೆ ಮಾದಕ ದ್ರವ್ಯ ನಿಯಂತ್ರಣ ಬ್ಯುರೊ (ಎನ್‌ಸಿಬಿ)ದ ಮುಂಬೈ ಘಟಕ ಟಿಟ್ವಾಲದಲ್ಲಿ 35 ವರ್ಷದ ಮಹಿಳೆಯನ್ನು ಬಂಧಿಸಿ 5 ಕೋ.ರೂ.ಗೂ ಅಧಿಕ ಮೌಲ್ಯದ ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.ಮಹಿಳೆಯ ವಶದಲ್ಲಿ 2.3 ಕಿ.ಗ್ರಾಂ. ಎಂಡಿಎಂಎ ಇತ್ತು ಎಂದು ಪೊಲೀಸರು ಹೇಳಿದ್ದಾರೆ. ಮಹಿಳೆ ವಾಸಿಸುತ್ತಿದ್ದ ಟಿಟ್ವಾಲದಲ್ಲಿರುವ ಫ್ಲ್ಯಾಟ್‌ನಲ್ಲಿ ಎನ್‌ಸಿಬಿ ತಂಡ ಶನಿವಾರ ತಡ ರಾತ್ರಿ ಶೋಧ ಕಾರ್ಯಾಚರಣೆ ನಡೆಸಿತು. ಈ ಸಂದರ್ಭ ಎನ್‌ಸಿಬಿ 5,000 ಮಾತ್ರೆಗಳನ್ನು ವಶಪಡಿಸಿಕೊಂಡಿತು. ಮಾದಕ ದ್ರವ್ಯ ಪೂರೈಕೆಗೆ ಸಂಬಂಧಿಸಿ ಎಪ್ರಿಲ್ 15ರಂದು ವ್ಯಕ್ತಿಯೋರ್ವನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಆತ ಮಾದಕ ದ್ರವ್ಯ ಪೂರೈಕೆಯಲ್ಲಿ ಈ ಮಹಿಳೆ ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದ. ಈ ಮಾಹಿತಿ ಆಧಾರದಲ್ಲಿ ಆಕೆ ವಾಸಿಸುವ ಸ್ಥಳದ ಮೇಲೆ ಎನ್‌ಸಿಬಿ ದಾಳಿ ನಡೆಸಲಾಗಿತ್ತು. ಎನ್‌ಸಿಬಿ ಮಹಿಳೆಯನ್ನು ಕಸ್ಟಡಿಗೆ ತೆಗೆದುಕೊಂಡಿದೆ. ಅಲ್ಲದೆ, ಮಾದಕ ದ್ರವ್ಯದ ಬೃಹತ್ ಜಾಲ ಹಾಗೂ ಪೂರೈಕೆ ಸರಪಣಿ ಗುರುತಿಸಲು ತನಿಖೆ ಮುಂದುವರಿಸಿದೆ.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *