Breaking News

ಅಮರಾವತಿ ಲೈಂಗಿಕ ಹಗರಣ: ಐಷಾರಾಮಿ ಜೀವನ, ಕಾರು, ನಗದು ಪ್ರದರ್ಶಿಸುತ್ತಿದ್ದ ಅಯಾನ್ ಅಹ್ಮದ್ ಆಸ್ತಿಯ ಮೇಲೆ ಪೊಲೀಸರ ಕಣ್ಣು!

ಅಮರಾವತಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಪರತ್ವಾಡದಲ್ಲಿ ನಡೆದ ಲೈಂಗಿಕ ಶೋಷಣೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಮುಖ್ಯ ಆರೋಪಿ 19 ವರ್ಷದ ಅಯಾನ್ ಅಹ್ಮದ್‌ನ ಅತಿಯಾದ ಐಷಾರಾಮಿ ಜೀವನದ ಬಗ್ಗೆ ಪೊಲೀಸರು ಈಗ ಗಮನ ಹರಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಆರೋಪಿಯು ದುಬಾರಿ ಕಾರುಗಳು, ಕಂತೆ ಕಂತೆ ನಗದು ಮತ್ತು ಮಾರಕಾಸ್ತ್ರಗಳನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ.ಸುಮಾರು 200 ಅಪ್ರಾಪ್ತ ಬಾಲಕಿಯರ ಲೈಂಗಿಕ ಶೋಷಣೆ ಮತ್ತು ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ತನಿಖೆಯ ವೇಳೆ ಆರೋಪಿಯು ಬಳಸುತ್ತಿದ್ದ MH-27-DL-3100 ನೋಂದಣಿ ಸಂಖ್ಯೆಯ ಮಹೀಂದ್ರಾ ಥಾರ್ SUV ಮತ್ತು ದುಬಾರಿ ಐಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯ ತಂದೆ ಹಳೆಯ ಕಾರುಗಳ ವ್ಯವಹಾರ ನಡೆಸುತ್ತಿದ್ದು, ಅಯಾನ್ ಅಹ್ಮದ್ ಆ ಕಾರುಗಳನ್ನೇ ತನ್ನ ಐಷಾರಾಮಿ ಪ್ರದರ್ಶನಕ್ಕೆ ಬಳಸುತ್ತಿದ್ದ ಎಂದು ತಿಳಿದುಬಂದಿದೆ. ಆದರೂ, ಆತನ ಬಳಿ ಇದ್ದ ದೊಡ್ಡ ಮೊತ್ತದ ನಗದು ಮತ್ತು ಬೆಟ್ಟಿಂಗ್ ಲಿಂಕ್‌ಗಳ ಬಗ್ಗೆ SIT ತನಿಖೆ ನಡೆಸುತ್ತಿದೆ. ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಅಯಾನ್ ಅಹ್ಮದ್ ಸೇರಿದಂತೆ ಒಟ್ಟು 8 ಜನರನ್ನು ಬಂಧಿಸಲಾಗಿದೆ.

Share News

About BigTv News

Check Also

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ: ಪರಿಶೀಲನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ಪರಿಶೀಲನೆ ನಡೆಸಿದರು. …

Leave a Reply

Your email address will not be published. Required fields are marked *