Breaking News

ಪಾಲಕ್ಕಾಡ್: ಕೋಳಿ ಸಾರು ಕೊಡದಿದ್ದಕ್ಕೆ ಸಿಟ್ಟಿನಿಂದ ಚಿಕ್ಕಪ್ಪನನ್ನು ಕೊಂದ ಯುವಕ

ಪಾಲಕ್ಕಾಡ್ ಎಪ್ರಿಲ್ 20: ಮನೆಯಲ್ಲಿ ತಯಾರಿಸಿದ ಕೋಳಿ ಸಾರನ್ನು ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕೆರಳಿದ ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನನ್ನು ಪೈಪ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಪಾಲಕ್ಕಾಡ್‌ನ ಕೌಂಡನೂರಿನಲ್ಲಿ ನಡೆದಿದೆ. ಸ್ಥಳೀಯ ಪೊಲೀಸರು ಆರೋಪಿ ಪ್ರಭಾಕರನ್ (45) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.ಮೃತಪಟ್ಟವರನ್ನು ಸೆಂಥಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ 6:30ರ ಸುಮಾರಿಗೆ ಈ ರಕ್ತಪಾತ ನಡೆದಿದೆ. ಮನೆಯಲ್ಲಿ ಕೋಳಿ ಸಾರು ತಯಾರಿಸಿದ್ದ ಸೆಂಥಿಲ್ ಕುಮಾರ್ ಅವರು ಅದನ್ನು ಪ್ರಭಾಕರನ್‌ಗೆ ನೀಡಿರಲಿಲ್ಲ. ಇದರಿಂದ ತೀವ್ರ ಆಕ್ರೋಶಗೊಂಡ ಪ್ರಭಾಕರನ್, ಸೆಂಥಿಲ್ ಕುಮಾರ್ ಅವರು ಮನೆಯ ಬಳಿಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಅವರನ್ನು ತಡೆದು ನಿಲ್ಲಿಸಿದ್ದಾನೆ. ಮಾತಿನ ಚಕಮಕಿ ಮಿತಿಮೀರಿ ಪ್ರಭಾಕರನ್ ತನ್ನ ಬಳಿಯಿದ್ದ ಪೈಪ್‌ನಿಂದ ಸೆಂಥಿಲ್ ಕುಮಾರ್ ಅವರ ತಲೆ ಮತ್ತು ದೇಹಕ್ಕೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಕುಮಾರ್ ಅವರನ್ನು ಪಾಲಕ್ಕಾಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಆರೋಪಿ ವಿರುದ್ಧ ಬಿಎನ್‌ಎಸ್ (BNS) ಕಾಯ್ದೆಯಡಿ ಕೊಲೆ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *