Breaking News

ಡಿಜಿ ಆರ್ಡರ್‌ಗೂ ತಲೆಕೆಡಿಸಿಕೊಳ್ಳದೇ, ರಸ್ತೆ ಮಧ್ಯೆ ದಂಡ ವಸೂಲಿ ಕೇಂದ್ರ” ಮಾಡಿದ್ದಾರೆಯೇ ಟ್ರಾಫಿಕ್ ಪೊಲೀಸರು..!

ಡಿಜಿ ಆರ್ಡರ್‌ಗೆ ಧಿಕ್ಕಾರ: ರಸ್ತೆ ಮೇಲೆ GST ವಸೂಲಿ’ ನಡೆಸುತ್ತಿರುವ ಟ್ರಾಫಿಕ್ ಪೊಲೀಸರು..!

ರಿಂಗ್ ರೋಡ್, ಬೈಪಾಸ್‌ಗಳಲ್ಲಿ ದಂಧೆ ಜೋರಾ..? ಡಾಕ್ಯುಮೆಂಟ್ ನೆಪದಲ್ಲಿ ಹಣ ಕೀಳ್ತಿದ್ದಾರೆ ಎಂಬ ಗಂಭೀರ ಆರೋಪ..!

ಜನರ ರಕ್ಷಕರುನಾ ಅಥವಾ ವಸೂಲಿ ಗ್ಯಾಂಗ್‌ನಾ..? ಟ್ರಾಫಿಕ್ ಪೊಲೀಸರ ವಿರುದ್ಧ ಆಕ್ರೋಶ ಸ್ಫೋಟ..!

ಹೊರ ರಾಜ್ಯದ ವಾಹನ ಕಂಡಾಕ್ಷಣ ಕೆಲ ಟ್ರಾಫಿಕ್ ಪೊಲೀಸರ ಕಣ್ಣಲ್ಲಿ “ಕಾನೂನು” ಅಲ್ಲ, “ಕಲೆಕ್ಷನ್” ಮಾತ್ರ ಕಾಣುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಗಸ್ತು ವಾಹನದ ಹೆಸರಿನಲ್ಲಿ ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಿ, ಡಾಕ್ಯುಮೆಂಟ್ ಪರಿಶೀಲನೆ ಎಂಬ ನೆಪದಲ್ಲಿ ನೇರವಾಗಿ ಹಣ ಕೇಳುವ ದಂಧೆ ನಡೆಯುತ್ತಿದೆ ಎಂಬುದು ಸಾರ್ವಜನಿಕರ ಕಳವಳ..

ರಿಂಗ್ ರೋಡ್, ಬೈಪಾಸ್ ರಸ್ತೆ, ಪ್ರಮುಖ ಜಂಕ್ಷನ್‌ಗಳು—ಎಲ್ಲಿ ನೋಡಿದರೂ ಒಂದೇ ಕಥೆ. ವಾಹನಗಳನ್ನು ಬೇಕಾದಂತೆ ನಿಲ್ಲಿಸಿ, ಮುಂದೆ ಬಿಡದೇ ಟ್ರಾಫಿಕ್ ಜಾಮ್ ಆದರೂ ಪರವಾಗಿಲ್ಲ ಎನ್ನುವ ನಿರ್ಲಕ್ಷ್ಯ. ಜನರು ತೊಂದರೆ ಅನುಭವಿಸುತ್ತಿದ್ದರೂ, ಕೆಲವರಿಗೆ ಅದು “ಡ್ಯೂಟಿ” ಅಲ್ಲ, ಡೀಲ್” ಆಗಿದೆ ಎಂಬ ಟೀಕೆ ಕೇಳಿಬರುತ್ತಿದೆ…

ಡ್ರೈವರ್‌ಗಳನ್ನು ಕರೆದು ಡಾಕ್ಯುಮೆಂಟ್ ಕೇಳುವುದು ಕಾನೂನುಬದ್ಧ. ಆದರೆ ಅದನ್ನೇ ನೆಪ ಮಾಡಿಕೊಂಡು ಸಣ್ಣ ತಪ್ಪು ಹಿಡಿದು “ಸಮಾಧಾನ ಮಾಡಿಕೊಳ್ಳಿ” ಎಂದು ಹಣ ಬೇಡುವುದು ದಿನನಿತ್ಯದ ಕಥೆಯಾಗುತ್ತಿದೆ. “ಒಂದು ಪೇಪರ್ ಇಲ್ಲ” ಅಂದ್ರೆ ಸಾಕು—ಬಲವಂತದ ವಸೂಲಿ ನಡೆಯುತ್ತಿದೆ ಎಂಬ ಆರೋಪಗಳು ಹೆಚ್ಚುತ್ತಿವೆ…

ಬಡ ವಾಹನ ಸವಾರರು ಪೊಲೀಸರ ಕೈಗೆ ಸಿಕ್ಕಾಗ, ಅವರ ಪರವಾಗಿ ಮಾತಾಡೋರು ಯಾರೂ ಇಲ್ಲ ಅನ್ನೋ ದುಃಖಕರ ಪರಿಸ್ಥಿತಿ. ಸರ್ಕಾರಿ ಸಂಬಳ ಇದ್ದರೂ, ರಸ್ತೆಯ ಮೇಲೆ ನಿಂತು ಹಪ್ತಾ ವಸೂಲಿ ಮಾಡ್ತಿದ್ದಾರೆ ಎನ್ನುವ ಗಂಭೀರ ಆರೋಪ ಜನರಲ್ಲಿ ಕೇಳಿಬರುತ್ತಿದೆ..

ಇನ್ನೊಂದು ಶಾಕಿಂಗ್ ಸಂಗತಿ ಏನೆಂದರೆ—ಇತ್ತೀಚೆಗೆ “GST” ಅನ್ನೋ ಶಬ್ದವೇ ರಸ್ತೆ ಮೇಲೆ ಕೇಳಿಬರುತ್ತಿದೆ ಅನ್ನೋ ಮಾತು. “Government Salary Tax” ಅಲ್ಲ, “Ground Settlement Tax” ಅಂತ ವ್ಯಂಗ್ಯವಾಗಿ ಹೇಳಿಕೊಳ್ಳುವ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ…

ಇಂತಹ ವರ್ತನೆ ಬಗ್ಗೆ ಮೇಲಾಧಿಕಾರಿಗಳಿಗೆ ಗೊತ್ತಿದೆಯಾ..? ಗೊತ್ತಿದ್ದರೂ ಕ್ರಮ ಕೈಗೊಳ್ಳದೇ ಮೌನ ವಹಿಸಿದ್ದಾರಾ..? ಅಥವಾ ಇನ್ನೂ ಮಾಹಿತಿ ತಲುಪಿಲ್ಲವೇ..? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಗಂಭೀರವಾಗಿ ಕೇಳಿಬರುತ್ತಿವೆ..

ಸಾರ್ವಜನಿಕರ ಒತ್ತಾಯ ಸ್ಪಷ್ಟ..ಇಂತಹ ಪೊಲೀಸರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಸಸ್ಪೆಂಡ್ ಮಾಡಿ, ಇಲಾಖೆಯ ಮಾನ ಉಳಿಸಬೇಕು. ಇಲ್ಲದಿದ್ದರೆ “ಜನರ ರಕ್ಷಕರು” ಅನ್ನೋ ನಂಬಿಕೆ ಕುಸಿಯುತ್ತದೆ..

ಪೊಲೀಸ್ ಇಲಾಖೆ ಜನರನ್ನು ಪ್ರೀತಿಯಿಂದ ನೋಡಬೇಕು—ಭಯದಿಂದಲ್ಲ…

ಕಾನೂನು ಜಾರಿಗೆ ತರೋ ಕೈಗಳು, ಜನರ ಕಷ್ಟದ ಹಣ ಕಸಿಯುವ ಕೈಗಳಾಗಬಾರದು..

ಇಗಾದರೂ ಮೇಲಾಧಿಕಾರಿಗಳು ಎಚ್ಚೆತ್ತು, ಸಸ್ಪೆಂಡ್ ಕ್ರಮ ಕೈಗೊಳ್ಳುತ್ತಾರಾ…

ಅಥವಾ ಈ ದಂಧೆ ಹೀಗೆ ಮುಂದುವರಿಯುತ್ತದೆಯಾ ಅನ್ನೋದು ಕಾದು ನೋಡಬೇಕಾಗಿದೆ.

Share News

About Shaikh BigTv

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *