ಕೋಟೆನಾಡು ಚಿತ್ರದುರ್ಗ ತಾಲೂಕು ಹಾಯ್ಕಲ್ ಗ್ರಾಮದಲ್ಲಿ ಪ್ರೇಮ ವಿವಾಹವಾಗಿ ಏಳು ತಿಂಗಳಲ್ಲೇ ನವವಿವಾಹಿತೆ ಅಸಹಜವಾಗಿ ಸಾವಿಗೀಡಾದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಪತಿ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಮೃತೆಯನ್ನು ತನುಜಾ ಎಂದು ಗುರುತಿಸಲಾಗಿದ್ದು, ಚಿತ್ರದುರ್ಗದ ಕಾಮನಬಾವಿ ಬಡಾವಣೆಯ ಮೀನಾಕ್ಷಿ ಮತ್ತು ಹೊನ್ನೂರಪ್ಪ ದಂಪತಿಯ ಪುತ್ರಿಯಾಗಿದ್ದಾರೆ. ತನುಜಾ ಹಾಗೂ ವೆಂಕಟೇಶ್ ನಡುವೆ ಪ್ರೇಮ ಸಂಬಂಧ ಬೆಳೆದು, ಕುಟುಂಬಗಳ ವಿರೋಧದ ನಡುವೆಯೇ ಏಳು ತಿಂಗಳ ಹಿಂದೆ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ. ಘಟನೆಯ ದಿನ ಅಕ್ಕಪಕ್ಕದ ಮನೆಯವರ ನಡುವೆ ನಡೆದ ಕ್ಷುಲ್ಲಕ ಜಗಳದ ವೇಳೆ ತನುಜಾ ಮೇಲೆ ಹಲ್ಲೆ ನಡೆದಿರುವ ಆರೋಪವೂ ಕೇಳಿಬಂದಿದೆ. ಬಳಿಕ ವೆಂಕಟೇಶ್ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ನಡುವೆ ಮೃತಳ ಪೋಷಕರು ಹಾಗೂ ಕುಟುಂಬಸ್ಥರು ಪತಿ ವೆಂಕಟೇಶ್ ಮತ್ತು ಅವರ ಕುಟುಂಬದವರ ವಿರುದ್ಧ ತುರುವನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

