Breaking News

ವೀಡಿಯೋ ಗೇಮ್ ವ್ಯಸನದ ದುರಂತ ಅಂತ್ಯ: 14 ವರ್ಷದ ಬಾಲಕ ನೇಣಿಗೆ ಶರಣು

ಹುಬ್ಬಳ್ಳಿ: ನಗರದಲ್ಲಿ ಮನಕಲಕುವ ಘಟನೆ ಸಂಭವಿಸಿದ್ದು, ವೀಡಿಯೋ ಗೇಮ್ ವ್ಯಸನಕ್ಕೆ ಒಳಗಾಗಿದ್ದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಉದಯನಗರ ನಿವಾಸಿ 14 ವರ್ಷದ ಸಮರ್ಥ ಮೃತ ಬಾಲಕನಾಗಿದ್ದು, ಮೊಬೈಲ್‌ನಲ್ಲಿ Free Fire ಆಟಕ್ಕೆ ಅವನು ಹೆಚ್ಚು ಅಡಿಕ್ಟ್ ಆಗಿದ್ದ ಎಂದು ತಿಳಿದುಬಂದಿದೆ. ದಿನಪೂರ್ತಿ ಗೇಮ್ ಆಡುತ್ತಿದ್ದ ಹಿನ್ನೆಲೆಯಲ್ಲಿ ತಾಯಿ ಮೊಬೈಲ್ ಕಸಿದುಕೊಂಡು, ಗೇಮ್ ಆಡದಂತೆ ಬುದ್ಧಿವಾದ ಹೇಳಿದ್ದಾರೆ. ಈ ವಿಚಾರದಿಂದ ಮನನೊಂದ ಬಾಲಕ ತನ್ನ ಕೊಠಡಿಗೆ ಹೋಗಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿಸುತ್ತದೆ. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಮತ್ತು ಗೇಮಿಂಗ್ ವ್ಯಸನದ ಅಪಾಯವನ್ನು ಮತ್ತೆ ಒಮ್ಮೆ ಎಚ್ಚರಿಸುತ್ತಿದ್ದು, ಪೋಷಕರು ಮತ್ತು ಸಮಾಜ ಹೆಚ್ಚು ಜಾಗೃತರಾಗಬೇಕೆಂಬ ಸಂದೇಶ ನೀಡಿದೆ.

Share News

About BigTv News

Check Also

ಪೊಲೀಸರ ಮೇಲೆಯೇ ಹಲ್ಲೆ ಆರೋಪ.. ಗಂಟೆಗಳು ಕಳೆದರೂ FIR ಇಲ್ಲ!

ಪೊಲೀಸರ ಮೇಲೆಯೇ ಕೈ ಎತ್ತಿದ ಪುಂಡರು.. ಪ್ರಕರಣ ದಾಖಲಿಸಲು ಪೊಲೀಸರಿಗೆ ಇಷ್ಟೊಂದು ವಿಳಂಬವೇಕೆ…? ಪೊಲೀಸರ ಮೇಲೆಯೇ ಹಲ್ಲೆ ಮಾಡುವಷ್ಟು ಬೆಳೆದ …

Leave a Reply

Your email address will not be published. Required fields are marked *