Breaking News

25.66 ಲಕ್ಷ ರೂ. ಹಣ ವಾಪಾಸ್ಸು ಕೊಡದೆ ವಂಚನೆ: ಪ್ರಕರಣ ದಾಖಲು

ಕಾರ್ಕಳ: ವ್ಯಕ್ತಿಯೊಬ್ಬರಿಗೆ ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಲ್ಲೂರು ಗ್ರಾಮದ ಗಣೇಶ ಆಚಾರ್ಯ(34) ಎಂಬವರಿಗೆ 2024ರ ಜು.23ರಂದು ಇನ್ಸಟಾಗ್ರಾಂ ಮೂಲಕ ಸುಜನ್ ಶೆಟ್ಟಿ ಸಿದ್ದಾಪುರ ಎಂಬುದಾಗಿ ಪರಿಚಯ ಮಾಡಿಕೊಂಡ ವ್ಯಕ್ತಿಯು ತನಗೆ ಕಾಲೇಜಿಗೆ ಹೋಗಲು 200ರೂ ಹಣ ಬೇಕೆಂದು ಒತ್ತಾಯಿಸಿ ಪಡೆದುಕೊಂಡಿದ್ದನು. ನಂತರ ಹಂತಹಂತವಾಗಿ ಫೋನ್ ಮಾಡಿ ತನಗೆ ಕಾಲೇಜಿಗೆ ಹಣ ಕಟ್ಟಲು, ಅನಾರೋಗ್ಯದ ಬಗ್ಗೆ , ಲ್ಯಾಪ್‌ಟಾಪ್ ರಿಪೇರಿ ಮಾಡಲು, ಕೃಷಿ ಸಾಲದ ಹಣ ಕಟ್ಟಲು ಹಣ ಬೇಕೆಂದು ನಂಬಿಸಿ ಹಣ ಪಡೆದುಕೊಂಡಿದ್ದ ಎನ್ನಲಾಗಿದೆ. ಆ ಹಣವನ್ನು ವಾಪಾಸು ಕೊಡಲು ಬ್ಯಾಂಕ್ ಖಾತೆ ಸರಿಪಡಿಸಲು ಹಣ ಬೇಕೆಂದು ನಂಬಿಸಿ ದಿನಾಂಕ 2024ರ ಜು.24ರಿಂದ 2026ರ ಎ.4ರವರೆಗೆ ಹಂತಹಂತವಾಗಿ 25,66,000ರೂ. ಹಣವನ್ನು ಪಡೆದು ವಾಪಾಸು ಕೊಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *