ದಾವಣಗೆರೆ : ಬಸವಣ್ಣ ರೈತನ ಕೃಷಿ ಕಾರ್ಯ ಚಟುವಟಿಕೆಯ ಶ್ರಮಿಕ ಜೀವಿ, ರೈತನ ಸ್ನೇಹಿ ಈ ಅನ್ನದಾತ ಎತ್ತುಗಳು, ಹಳ್ಳಿಗಳಲ್ಲಿ ಎತ್ತುಗಳಿಂದಲೇ ಕೃಷಿ ಕೆಲಸ ಪ್ರಾರಂಭವಾಗುತ್ತದೆ, ಹೀಗಾಗಿ ರೈತರು ತಮ್ಮ ಎತ್ತುಗಳನ್ನು ಕಾಳಜಿಯಿಂದ ಸಾಕುತ್ತಾರೆ, ಅದೇ ರೀತಿ ಇಲ್ಲೊಬ್ಬ ರೈತ ತನ್ನ ಜೋಡೆತ್ತನ್ನು ಪ್ರೀತಿಯಿಂದ ಸಾಕಿದ್ದ, ಆದರೆ ದುರಾದೃಷ್ಟವಶಾತ್ ಎರಡು ಎತ್ತುಗಳು ಸಾವನ್ನಪ್ಪಿದ್ದು, ರೈತ ಕಣ್ಣೀರು ಹಿಡುವಂತಾಗಿದೆ..ಹೌದು.. ದಾವಣಗೆರೆ ತಾಲ್ಲೂಕಿನ ಮಲ್ಲಾಪುರದಲ್ಲಿ ರೈತ ಅಣ್ಣಪ್ಪ ’ಮಂಜ-ನಾಗ’ ಎಂಬ ಜೋಡೆತ್ತು ಪ್ರೀತಿಯಿಂದ ಸಾಕಿದ್ದ, ಅವುಗಳು ರೈತನ ಸ್ನೇಹ ಬೆಳೆಸಿ ಅವನೊಂದಿಗೆ ಕೃಷಿಯಲ್ಲಿ ತೊಡಗಿಕೊಂಡಿದ್ದವು. ಪ್ರತಿನಿತ್ಯ ಹೊಲಕ್ಕೆ ಹೋಗಿ ಉಳುಮೆ, ಕುಂಟೆ ಹೊಡೆಯುವುದು ಅವುಗಳ ದಿನನಿತ್ಯದ ಕೆಲಸವಾಗಿತ್ತು, ಆದರೆ ಆ ಪ್ರೀತಿಗೆ ದೇವರು ಕೊನೆ ಮೊಳೆ ಹೊಡೆದು ಬಿಟ್ಟಿದ್ದ, ಆಕಸ್ಮಿಕವಾಗಿ ಯೂರಿಯಾ ಗೊಬ್ಬರ ಸೇವಿಸಿದ್ದ ಜೋಡೆತ್ತು ದುರಂತ ಸಾವು ಕಂಡಿವೆ.ಅಕ್ಕಿನುಚ್ಚಿನೊಂದಿಗೆ ಮಿಶ್ರಿತವಾದ ಯೂರಿಯಾ ಗೊಬ್ಬರ ಸೇವಿಸಿದ್ದ ಪರಿಣಾಮ ಜೋಡೆತ್ತುಗಳು ಸಾವನ್ನಪ್ಪಿವೆ ಎಂದು ಹೇಳಲಾಗಿದೆ. ಸುಮಾರು ೧೦ ವರ್ಷಗಳಿಂದ ರೈತನ ಕಷ್ಟಕ್ಕೆ ಹೆಗಲು ಕೊಟ್ಟಿದ್ದ ಎತ್ತುಗಳು, ಅಚಾತುರ್ಯದಿಂದ ಸಾವನ್ನಪ್ಪಿದ್ದು, ರೈತ ಕಂಗಾಲಾಗುವಂತೆ ಮಾಡಿವೆ. ಮೆಕ್ಕೆಜೋಳ ಹೊಲಕ್ಕೆ ಯೂರಿಯಾ ಗೊಬ್ಬರ ಹಾಕಿ, ೧ ಕೆಜಿಯಷ್ಟು ಗೊಬ್ಬರವನ್ನು ಮೆಣಸಿನ ಗಿಡಕ್ಕೆ ಹಾಕಲು ಪ್ಯಾಕೆಟ್ ಒಂದರಲ್ಲಿ ಶೇಖರಿಸಿಯಿಡಲಾಗಿದೆ, ಅದೇ ಖಾಲಿ ಪ್ಯಾಕೇಟ್ ನಲ್ಲಿ ಗೊತ್ತಾಗದೇ ಅಕ್ಕಿನುಚ್ಚು ಹಾಕಿದ್ದಾರೆ. ಬೆಳಿಗ್ಗೆ ಎಂದಿನಂತೆ ಹಸುವಿಗೆ ತಿಂಡಿ ತಿನ್ನಿಸಿ ಕುಂಟೆ ಹೊಡೆಯಲು ರೈತ ಹಣಿಯಾಗುತ್ತಿದ್ದ, ಹೀಗೆ ತಿಂಡಿಯಾ ಜೊತೆ ಅಕ್ಕಿ ನುಚ್ಚು ಬೆರೆಸಲಾಗಿದೆ, ಆಕಸ್ಮಿಕವಾಗಿ ಅಕ್ಕಿನುಚ್ಚಲ್ಲಿ ಯೂರಿಯಾ ಮಿಶ್ರಣವಾಗಿದ್ದು ರೈತನಿಗೆ ಗಮನಕ್ಕೆ ಬಂದಿಲ್ಲ, ಎತ್ತುಗಳಿಗೆ ತಿಂಡಿಯಾ ಜೊತೆ ಅಕ್ಕಿ ನುಚ್ಚು ಹಾಕಿದ ಬಳಿಕ ಮಿಶ್ರಣಗೊಂಡಿದ್ದ ಯೂರಿಯಾ ಎತ್ತುಗಳ ದೇಹ ಸೇರಿ ಎತ್ತುಗಳು ನರಳಾಟ ಶುರು ಮಾಡಿವೆ. ಎಚ್ಚರಗೊಂಡ ರೈತ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿದ್ದಾರೆ, ಚಿಕಿತ್ಸೆ ಫಲಕಾರಿಯಾಗದೇ ಎತ್ತುಗಳು ಕೊನೆಯುಸಿರು ಎಳೆದಿವೆ.ಒಟ್ಟಾರೆ ಘಟನೆಯಿಂದ ಕಂಗೆಟ್ಟಿರುವ ರೈತ ಅಣ್ಣಪ್ಪ ಕಣ್ಣೀರು ಹಿಡುತ್ತಾ ಹಾಸಿಗೆ ಹಿಡಿದಿದ್ದಾರೆ, ಇನ್ನೂ ಈ ಬಲವಾದ ಎತ್ತುಗಳ ಸಾವಿನ ಸುದ್ದಿ ತಿಳಿದ ಕೂಡಲೇ ಸುತ್ತಮುತ್ತಲಿನ ಗ್ರಾಮಸ್ಥರು ಅಂತಿಮ ದರ್ಶನ ಪಡೆದಿದ್ದಾರೆ. ರೈತ ತನ್ನ ಪ್ರೀತಿಯ ಎತ್ತುಗಳನ್ನು ಮನುಷ್ಯರಂತೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಪೂಜೆ ಸಲ್ಲಿಸಿ ತನ್ನ ಹೊಲದಲ್ಲೆ ಅಂತ್ಯಕ್ರಿಯೆ ಮಾಡಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





