ಬೆಳ್ತಂಗಡಿ: ನಗರದ ಲಾಯಿಲಾದ ಗ್ಯಾಸ್ ಏಜೆನ್ಸಿ ಒಂದರಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸರಿಯಾಗಿ ವಿತರಿಸುತ್ತಿಲ್ಲ ಎಂದು ಕುವೆಟ್ಟು ಗ್ರಾಮದ ಮಹಮ್ಮದ್ ರಫೀಕ್ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರರ ಮೂಲಕ ದೂರು ನೀಡಿದ್ದಾರೆ. ದಿನ ಬಳಕೆಯ ಸಿಲಿಂಡರ್ ಪಡೆಯಲು 10 ರಿಂದ 20 ದಿನಗಳವರೆಗೆ ಕಾಯಬೇಕಾಗಿದೆ. ಅಲ್ಲದೇ ಮನೆಗೆ ತಲುಪಿಸದೇ ಕಚೇರಿಗೆ ಬಂದು ಕೊಂಡೊಯ್ಯುವಂತೆ ಹೇಳುತ್ತಿದ್ದಾರೆ. ಕಚೇರಿಯಲ್ಲಿ ಹೋದರೆ ಬೇರೆ ದಿನ ಬನ್ನಿ ಅಂತ ಹೇಳುತ್ತಾರೆ ಎಂದು ಆರೋಪಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

