Breaking News

ಎಪಿಕೆ ಫೈಲ್‌ ಕಳುಹಿಸಿ ವಂಚನೆ

ತುಮಕೂರು: ಎಪಿಕೆ ಫೈಲ್‌ ಕಳುಹಿಸಿ ನಗರದ ಗೋಕುಲ ಬಡಾವಣೆಯ ಎಚ್‌.ಸಿ.ನರಸೀದೇವರು ಎಂಬುವರಿಗೆ ₹8.77 ಲಕ್ಷ ವಂಚಿಸಲಾಗಿದೆ. ನರಸೀದೇವರು ಅವರ ಬ್ಯಾಂಕ್‌ ಖಾತೆಯಿಂದ ಏ. 4ರಿಂದ 7ರ ವರೆಗೆ ಹಂತ ಹಂತವಾಗಿ ಒಟ್ಟು ₹8,77,149 ಕಡಿತಗೊಂಡಿದೆ. ಏ. 4ರಂದು ಅವರ ಮೊಬೈಲ್‌ಗೆ ಯಾವುದೇ ಕರೆ, ಮೆಸೇಜ್‌ ಬಂದಿಲ್ಲ. ಮತ್ತೊಂದು ಸಿಮ್‌ ಖರೀದಿಸಿದ್ದಾರೆ. ನಂತರ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಖಾತೆಯಲ್ಲಿ ಕೇವಲ ₹441 ಮಾತ್ರ ತೋರಿಸಿದೆ. ಇದಾದ ಬಳಿಕ ಮೊಬೈಲ್‌ ಪರಿಶೀಲಿಸಿದ್ದು, ಎಪಿಕೆ ಫೈಲ್‌ ಡೌನ್‌ಲೋಡ್‌ ಆಗಿರುವುದು ಗೊತ್ತಾಗಿದೆ. ಹಣ ವಾಪಸ್‌ ಕೊಡಿಸುವಂತೆ ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *