ಹುಬ್ಬಳ್ಳಿ :ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಮತದಾನ ಹಿನ್ನೆಲೆ ಎನ್ ಆರ್ ದೇಸಾಯಿ ರೊಟರಿ ಸ್ಕೂಲ್ ನಲ್ಲಿ ಮತದಾನ ಕೇಂದ್ರಕ್ಕೆ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಭೇಟಿ ನೀಡಿದ್ದಾರೆ.
ಮತಗಟ್ಟೆ ಭೇಟಿಯ ಬಳಿಕ ಬಿಜೆಪಿ ಅಭ್ಯರ್ಥಿ ಹೊರಟ್ಟಿ ಸುದ್ದಿಗಾರರೊಂದಿಗೆ ಮಾತನಾಡಿ, ಮತದಾನದ ಒಟ್ಟು ಮತಗಳಲ್ಲಿ 70 % ಮತಗಳಿಂದ ಗೆಲುತ್ತೆವೆ.ಎಲ್ಲಾ ಕಡೆ ಓಡಾಡಿದಿನಿ, ಮೊದಲು ಲೀಡರ್ಸ್ ಓಟ್ ಹಾಕ್ತಾಯಿದ್ದಾರೆ.ಎಲ್ಲಾ ಕಡೆ ಎರಡೆರಡು ಟೀಮ್ ಮಾಡಿದಿವಿ ಎಲ್ಲರಿಗೂ ಹತ್ತ ಗಂಟೆಯ ಒಳಗೆ ಮತ ಹಾಕಲಿಕ್ಕೆ ಹೇಳಿದ್ವಿ.ಹತ್ತು ಗಂಟೆಯ ನಂತರ ಬರದೆಯಿರೊರನ್ನ ಕರೆಸುವ ಯತ್ನ ಮಾಡ್ತೆವೆ.
ಭ್ರಷ್ಟಾಚಾರ ಆರೋಪಗಳ ಬಗ್ಗೆ ಕಾನೂನು ಪ್ರಕಾರ ಉತ್ತರ ಕೊಡುವೆ.ಭ್ರಷ್ಟಾಚಾರದ ವಿಚಾರ ನಾನು ಮೊದಲೇ ಹೇಳಿರುವೆ.ಭ್ರಷ್ಟಾಚಾರ ಸಾಕ್ಷಿ ಕೊಟ್ಟರೆ ಚುನಾವಣೆಯಿಂದ ಹಿಂದೆ ಸರಿಯುತ್ತೆಂದು ಹೇಳಿದ್ದೆ ಆದರೆ ಒಬ್ಬರು ಬಂದಿಲ್ಲ .ಕೇವಲ ಚುನಾವಣೆ ಬಂದಾಗ ಆರೋಪ ಮಾಡ್ತಾರೆ.42 ವರ್ಷ ನಾನು ಯಾವುದೆ ಭ್ರಷ್ಟಾಚಾರ ಮಾಡಿಲ್ಲ.ಒಂದು ವಾರದಿಂದ ಕೇವಲ ಬರೀ ಆರೋಪ ಮಾಡ್ತಾಯಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

