ಸೋಮವಾರಪೇಟೆ: ಸಮೀಪದ ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಕಾಲೇಜು ಬಳಿ ಶನಿವಾರ ಸಂಜೆ ಸಂಭವಿಸಿದ ಕಾರು ಮತ್ತು ಟೆಂಪೊ ಟ್ರಾವೆಲ್ಸ್ ನಡುವೆ ಡಿಕ್ಕಿಸಂಭವಿಸಿ, ಎರಡೂ ವಾಹನಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಸೆಲಾರಿಯೊ ಕಾರು ಸೋಮವಾರಪೇಟೆಯಿಂದ ಶಾಂತಳ್ಳಿ ಮಾರ್ಗವಾಗಿ ಬೀದಳ್ಳಿ ಗ್ರಾಮಕ್ಕೆ ತೆರಳುತ್ತಿತ್ತು. ಇನ್ನೊಂದೆಡೆ ಹಾಸನ ಜಿಲ್ಲೆಯ ಟೆಂಟೊ ಟ್ರಾವೆಲ್ಸ್‌ನಲ್ಲಿದ್ದ ಪ್ರಯಾಣಿಕರು ಶಾಂತಳ್ಳಿ ಸಮೀಪದ ಮಲ್ಲಳ್ಳಿ ಜಾಲಪಾತ ವೀಕ್ಷಿಸಿ ವಾಪಾಸ್ ಹಾಸನಕ್ಕೆ ತೆರಳುತ್ತಿದ್ದರು. ಆಗ ಅಪಘಾತ ಸಂಭವಿಸಿದೆ. ಕಾರು ಬಿದಳ್ಳಿ ಗ್ರಾಮದ ವೀರರಾಜು ಅವರದು. ಕಾರಿನ ಮುಂಭಾಗ ಮತ್ತು ಬಲ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

