ಚಿಕ್ಕೋಡಿ: ಈಗಾಗಲೇ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾನದಿಯಲ್ಲಿ ಸಧ್ಯ ೨ ಲಕ್ಷ ೮೦ ಸಾವಿರ ಕ್ಯೂಸೇಕ್ ನೀರು ಹರಿದು ಬರುತ್ತಿದೆ. ಇನ್ನು ೫೦ ಸಾವಿರ ಕ್ಯೂಸೆಕ್ ನೀರು ಬಂದರೆ ಯಾವುದೇ ಕ್ಷಣದಲ್ಲಾದರೂ ಅಪಾಯ ಎದುರಾಗಬಹುದಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಎನ್ ಡಿ ಆರ್ ಎಫ್ ಹಾಗೂ ಸೈನ್ಯದಿಂದ ಕಾರ್ಯಾಚರಣೆ ಪ್ರಾರಂಭವಾಗಿದ್ದು, ೯೯ ಸೈನಿಕರು ೪೫ ಕ್ಕೂ ಹೆಚ್ಚು ಎನ್ ಡಿ ಆರ್ ಎಫ್ ಸಿಬ್ಬಂಧಿಗಳಿಂದ ಕಾರ್ಯಾಚರಣೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಹಾಗೂ ತಂಡಗಳು ಈಗಾಗಲೇ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆತರುತ್ತಿವೆ. ಸಧ್ಯ ನಡುಗಡ್ಡೆಗಳಿಗೆ ಬೋಟ್ ಮೂಲಕ ತೆರಳಲಿರುವ ಸೇನಾ ಮತ್ತು ಎನ್ ಡಿ ಆರ್ ಎಫ್ ತಂಡಗಳು ಯಡೂರುವಾಡಿ, ಡೋಣಿತೋಟ, ಕಲ್ಲೋಳ ಗ್ರಾಮ,ಇಂಗಳಿ, ಗ್ರಾಮದ ತೋಟಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುತ್ತಲಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





