Breaking News

ಲವ್‌ ಜಿಹಾದ್‌ ಆರೋಪ; ಮುಸ್ಲಿಂ ಯುವಕನಿಗೆ ಥಳಿಸಿದ ಹಿಂದೂ ಮುಖಂಡರು, 8 ಮಂದಿ ಪೊಲೀಸ್‌ ವಶಕ್ಕೆ

ಕೊಪ್ಪಳ: ಕೊಪ್ಪಳದಲ್ಲಿ ಲವ್ ಜಿಹಾದ್ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಹಿಂದೂ ಅಪ್ರಾಪ್ತೆಯೊಂದಿಗೆ ಓಡಾಡುತ್ತಿದ್ದ ಮುಸ್ಲಿಂ ಯುವಕನಿಗೆ ಹಿಂದೂಪರ ಮುಖಂಡರು ಥಳಿಸಿದ ಘಟನೆರ ನಡೆದಿದೆ. ಮುಸ್ಲಿಂ ಯುವಕ ಸಮೀರ್ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿಂದೂಪರ‌ ಮುಖಂಡರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂಟು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಇಲಾಖೆ ನಡೆಗೆ ಹಿಂದೂಪರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮೀರ್ ಹಿಂದೂ ಅಪ್ರಾಪ್ತೆಯ ಜೊತೆ ಸಲ್ಲಾಪವಾಡಿದ ಆರೋಪವಿದ್ದು, ಸಮೀರ್ ಮೊಬೈಲ್ ನಲ್ಲಿ ಎಲ್ಲವೂ ಇವೆ. ಆತನ ಮೇಲೆ ಕೇಸ್ ಮಾಡಿ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *