ತಿಪಟೂರು: ತಾಲ್ಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಬುಧವಾರ ಎಟಿಎಂನ ಸಿಸಿಟಿವಿ ಕ್ಯಾಮೆರಾಕ್ಕೆ ಬಿಳಿಬಣ್ಣದ ಲೇಪನ ಮಾಡಿ ಡಿಜಿಟಲ್ ಲಾಕರ್ ಒಡೆದು ₹6ಲಕ್ಷ ಕಳ್ಳತನ ಮಾಡಲಾಗಿದೆ. ಕಿಬ್ಬನಹಳ್ಳಿ ಕ್ರಾಸ್‌ನ ಮಾತಾ ರೆಸಿಡೆನ್ಸಿ ಆವರಣದ ಎಸ್‌ಬಿಐ ಬ್ಯಾಂಕ್‌ಗೆ ಸೇರಿದ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರ ಗುಂಪು, ಎಟಿಎಂ ಯಂತ್ರವನ್ನು ಹಾನಿಗೊಳಿಸಿ ಅದರ ಡಿಜಿಟಲ್ ಲಾಕರ್ ಒಡೆದು ಹಾಕಿದ್ದು ಬಳಿಕ ಯಂತ್ರದಲ್ಲಿದ್ದ ₹6 ಲಕ್ಷ ನಗದು ದರೋಡೆ ಮಾಡಿದ್ದಾರೆ.ಎಟಿಎಂ ಕೇಂದ್ರಕ್ಕೆ ಭದ್ರತಾ ಸಿಬ್ಬಂದಿ ಇರಲಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

