ಮೈಸೂರು: ಗಾಂಜಾ ಸೇವನೆ ಪ್ರಕರಣದ ಆರೋಪಿಯಾಗಿದ್ದ ರಾಮಕೃಷ್ಣ ನಗರದ ನಿವಾಸಿ ಎಂ.ಮಧು (22) ಎಂಬುವರು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಪೋಷಕರು ದೂರು ನೀಡಿದ್ದು, ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶವ ಪರೀಕ್ಷೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕುವೆಂಪುನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. ಮೇ 6ರ ರಾತ್ರಿ 9 ಗಂಟೆಗೆ ರಾಮಕೃಷ್ಣನಗರದ ಕೆ ಬ್ಲಾಕ್ ಆಲದಮರದ ಬಳಿ ಮಧು ಗಾಂಜಾ ಸೇವಿಸಿ ಸಿಕ್ಕಿ ಬಿದ್ದಿದ್ದ. ಗಾಂಜಾ ಸಿಗರೇಟಿನಲ್ಲಿ ಹಾಕಿ ಸೇವಿಸುರುವುದಾಗಿ ಒಪ್ಪಿಕೊಂಡಿದ್ದ. ವೈದ್ಯಕೀಯ ತಪಾಸಣೆಯಲ್ಲೂ ಸೇವನೆ ಮಾಡಿರುವುದು ದೃಢಪಟ್ಟಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

