ಮೈಸೂರು: ರೌಡಿಗಳ ಚಟುವಟಿಕೆ ಹತ್ತಿಕ್ಕಲು ಮುಂದಾಗಿರುವ ನಗರ ಪೊಲೀಸರು, 30 ರೌಡಿಗಳ ಮನೆ ಮೇಲೆ ಶನಿವಾರ ನಸುಕಿನಲ್ಲಿ ದಾಳಿ ನಡೆಸಿದರು. ಕೊಲೆ, ಕೊಲೆಗೆ ಯತ್ನ, ಸುಲಿಗೆ, ಹಲ್ಲೆ ಹಾಗೂ ಇತರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದವರು ಮತ್ತೆ ಅಪರಾಧ ಕೃತ್ಯದಲ್ಲಿ ತೊಡಗುವುದನ್ನು ತಪ್ಪಿಸಲು ಹಾಗೂ ಎಚ್ಚರಿಕೆ ನೀಡಲು ಕಾರ್ಯಾಚಾರಣೆ ನಡೆಸಿದರು. ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಬೆಳಿಗ್ಗೆ 5ರಿಂದ 8 ಗಂಟೆವರೆಗೆ ಕೃಷ್ಣರಾಜ, ವಿಜಯನಗರ, ನರಸಿಂಹರಾಜ ಮತ್ತು ದೇವರಾಜ ಉಪ ವಿಭಾಗಗಳ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ರೌಡಿಗಳ ಮನೆಯಲ್ಲಿದ್ದ ಕೋರ್ಟ್ ವಾರೆಂಟ್ ಹಾಗೂ ವಸ್ತುಗಳನ್ನು ಪರಿಶೀಲಿಸಿದರು. ಕಾರ್ಯಾಚರಣೆಯಲ್ಲಿ ಡಿಸಿಪಿ ಗಳಾದ ಹರ್ಷ ಪ್ರಿಯಂವದಾ, ಸುಂದರ್‌ರಾಜ್ ಸೇರಿದಂತೆ ಇನ್‌ಸ್ಪೆಕ್ಟರ್, ಸಬ್‌ಇನ್‌ಸ್ಪೆಕ್ಟರ್, ಸಿಬ್ಬಂದಿ ಪಾಲ್ಗೊಂಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

