ಗಂಗೊಳ್ಳಿ: ಕಾರು ಕಳವು ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳು ಸ್ಥಳದಲ್ಲಿ ಬೈಕ್ ಬಿಟ್ಟು ಪರಾರಿಯಾದ ಘಟನೆ ನಿರೋಣಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಮರವಂತೆ ಗ್ರಾಮದ ರಿತೇಶ್ ದೇವಾಡಿಗ ಅವರು ಮೇ 11ರಂದು ರಾತ್ರಿ ಶಾಮಿಯಾನ ಅನ್‌ಲೋಡ್ ಮಾಡಿಕೊಂಡು ವಾಪಸ್ಸಾಗುವ ವೇಳೆ, ‘ಶ್ರೀ ವರಾಹ ಸರ್ವಿಸ್ ಸ್ಟೇಶನ್’ ಎದುರು ನಿಲ್ಲಿಸಿದ್ದ ಕಾರನ್ನು ಇಬ್ಬರು ಕಳವು ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ರಿತೇಶ್ ಬರುವುದನ್ನು ಕಂಡ ಅಪರಿಚಿತರು ಅವರನ್ನು ದೂಡಿ ಆರೋಪಿಗಳು ತಾವು ಬಂದಿದ್ದ ಬೈಕ್‌ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

