ಧಾರವಾಡ : ಭಾರತ ಶಾಂತಿಯ ತೋಟ , ಶಾಂತಿಗೆ ಹೆಸರಾದ ದೇಶ ಇಂತಹ ದೇಶದಲ್ಲಿ ಶಾಂತಿ ಕದಡುವ ಕೆಲಸವಾಗುತ್ತಿದೆ ಆ ಮೂಲಕ ಉದ್ವಿಗ್ನತೆ ಉಂಟಾಗುವಂತೆ ಮಾಡಲಾಗುತ್ತಿದೆ . ಈ ಪರಿಸ್ಥಿತಿಯನ್ನು ಹತೋಟಿಗೆ ತರುವಂತೆ ಆಗ್ರಹಿಸಿ ಅಂಜುಮನ್ – ಎ – ಇಸ್ಲಾಂ ಸಂಸ್ಥೆ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು .
ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರು ಪ್ರವಾದಿ ಮೊಹ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು , ಇಡೀ ದೇಶದಲ್ಲಿ ವಿವಾದ ಹುಟ್ಟು ಹಾಕಿದೆ . ಇವರ ಹೇಳಿಕೆಯಿಂದ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ . ಕೋಪ , ಪ್ರತೀಕಾರದಿಂದ ಭಾರತದ ಚಿತ್ರಣ ಜಾಗತಿಕವಾಗಿ ಅರುದಲ್ಲಿದೆ ಯಾವುದೇ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡುವವರ ಮೇಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news





