Breaking News

ನಾಲ್ಕು ನಕಲಿ ಕಾಲ್‌ ಸೆಂಟರ್‌ಗಳ ಮೇಲೆ ದಾಳಿ: ₹40 ಕೋಟಿ ಅಕ್ರಮ ಬಯಲಿಗೆ

ಬೆಂಗಳೂರು ನಗರದಲ್ಲಿ ಅಮೆರಿಕದ ಪ್ರಸಿದ್ಧ ಲೆಕ್ಕಪತ್ರ ಸಂಸ್ಥೆ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ನಕಲಿ ಕಾಲ್‌ ಸೆಂಟರ್‌ಗಳ ಮೇಲೆ ಸೈಬರ್ ಕಮಾಂಡ್‌ ಸೆಂಟರ್‌ ದಾಳಿ ನಡೆಸಿ ಸುಮಾರು ₹40 ಕೋಟಿ ಅಕ್ರಮವನ್ನು ಬಯಲಿಗೆಳೆದಿದೆ. ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ಪ್ರಶಾಂತ್‌ ಹಾಗೂ ಉತ್ತರ ಪ್ರದೇಶದ ಆಕಾಶ್‌ರನ್ನು ಬಂಧಿಸಲಾಗಿದೆ. ಚೂಡಸಂದ್ರ, ಪರಪ್ಪನ ಅಗ್ರಹಾರ ಹಾಗೂ ಕೋರಮಂಗಲ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಕಾಲ್‌ ಸೆಂಟರ್‌ಗಳಿಂದ ಎಸ್‌ಎಸ್‌ಡಿ, ಲ್ಯಾಪ್‌ಟಾಪ್‌, ಮೊಬೈಲ್‌ ಸೇರಿದಂತೆ ಹಲವು ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಅಮೆರಿಕದ ನಾಗರಿಕರಿಗೆ ಕರೆ ಮಾಡಿ ತೆರಿಗೆ ಸಲಹೆ ಹಾಗೂ ಪರವಾನಗಿ ನವೀಕರಣದ ಹೆಸರಿನಲ್ಲಿ ವಂಚನೆ ನಡೆಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *