ಪುತ್ತೂರು ತಾಲ್ಲೂಕಿನ ಬಜತ್ತೂರು ಗ್ರಾಮದ ವಳಾಲು ಸಮೀಪ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನಿರ್ದಿಷ್ಟ ಕಾಮಗಾರಿಗೆ ನೀಡಿರುವ ಪರವಾನಗಿಯನ್ನು ದುರುಪಯೋಗಪಡಿಸಿಕೊಂಡು, ದಿನಕ್ಕೆ ನೂರಾರು ಲಾರಿಗಳಲ್ಲಿ ಮರಳು ಹೊರ ಜಿಲ್ಲೆಗಳಿಗೆ ಸಾಗಿಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಕೊಣಾಜೆ ಕಾಮಗಾರಿಗಾಗಿ ಅನುಮತಿ ಪಡೆದ ಮರಳು, ಅಲ್ಲಿಗೆ ಸಾಗದೆ ಪುತ್ತೂರು, ಬೆಳ್ತಂಗಡಿ ಹಾಗೂ ಸಕಲೇಶಪುರ ಭಾಗಗಳಿಗೆ ಅಕ್ರಮವಾಗಿ ಸಾಗುತ್ತಿದೆ ಎನ್ನಲಾಗಿದೆ. 24 ಗಂಟೆಯೂ ದೋಣಿ, ಜೆಸಿಬಿ ಹಾಗೂ ಲಾರಿಗಳ ಮೂಲಕ ಮರಳು ಸಾಗಾಟ ನಡೆಯುತ್ತಿದ್ದು, ಶಬ್ದ ಮಾಲಿನ್ಯದಿಂದ ಸ್ಥಳೀಯರಿಗೆ ತೊಂದರೆ ಉಂಟಾಗಿದೆ. ನದಿಗೆ ತಡೆ ನಿರ್ಮಿಸಿ ಮರಳು ತೆಗೆಯಲಾಗುತ್ತಿದ್ದು, ನೀರಿನ ಹರಿವಿಗೂ ಪರಿಣಾಮ ಬೀರಿದೆ ಎಂದು ಆರೋಪಿಸಲಾಗಿದೆ. ಜೊತೆಗೆ, ಮರಳು ಸಂಗ್ರಹಿಸುವ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ವ್ಯವಸ್ಥೆ ಇಲ್ಲ ಎಂಬ ಆತಂಕವೂ ವ್ಯಕ್ತವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

