Breaking News

ಮುಡಾದಲ್ಲಿ ಸಾವಿರಾರು ಕೋಟಿಯ ಹಗರಣವಿದೆ : ಬೆಲ್ಲದ್

ಧಾರವಾಡ: ಮುಡಾ ಹಗರಣದ ಎ4 ಆರೋಪಿ ದೇವರಾಜು ಅವರ ಮೈಸೂರು ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಪ್ರತಿಕ್ರಿಯೆ ನೀಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯ ಕಂಡ ಅತ್ಯಂತ ದೊಡ್ಡ ಹಗರಣ ಈ ಮುಡಾ ಹಗರಣ. ಇಲ್ಲಿ ಇಡಿ ದಾಳಿ ನಿರೀಕ್ಷಿತವಾಗಿತ್ತು. ಮುಡಾದಲ್ಲಿ ಸಾವಿರಾರು ಕೋಟಿಯ ಹಗರಣವಿದೆ. ಸಿಎಂ ಬೇರೆ ಬೇರೆ ದಾರಿಯಿಂದ ಕಾರಣ ಹೇಳಿ ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ ಎಂದರು.

ಸಿಎಂ ಮುಡಾ ಬಿಟ್ಟು ಬೇರೆ ಬೇರೆ ಹೇಳಿಕೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಸೈಟ್ ವಾಪಸ್ ಮಾಡಿದರು. ಮುಡಾ ಅಧ್ಯಕ್ಷರ ರಾಜೀನಾಮೆ ಕೊಡಿಸಿದರು. ಇವರ ತಪ್ಪು ಇಲ್ಲ ಎಂದ ಮೇಲೆ ಮರಿಗೌಡ ರಾಜೀನಾಮೆ ಯಾಕೆ ಕೊಡಬೇಕಿತ್ತು? ಅವರ ತಪ್ಪು ಇಲ್ಲ ಎಂದಿದ್ದರೆ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸಬೇಕಿತ್ತು. ಇ.ಡಿಯವರು ಇಂದು ಹೆಚ್ಚಿನ ದಾಖಲೆ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿ ಕೆಲವೇ ದಿನ ಇರಲಿದ್ದಾರೆ. ಮುಂದೆ ಅವರು ರಾಜೀನಾಮೆ ಕೊಡುವ ಪರಿಸ್ಥಿತಿ ಬಂದೇ ಬರುತ್ತದೆ ಎಂದರು.

Share News

About Shaikh BigTv

Check Also

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ!

ದೊಡ್ಡಬಳ್ಳಾಪುರ: ಹೋಟೆಲ್‌ನಲ್ಲಿ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ …

Leave a Reply

Your email address will not be published. Required fields are marked *