Breaking News

ಬೆಂಗಳೂರು| ಊಟ ಮಾಡುವಾಗ ಇಬ್ಬರ ನಡುವೆ ಗಲಾಟೆ: ದೊಣ್ಣೆಯಿಂದ ಹೊಡೆದು ವ್ಯಕ್ತಿ ಕೊಲೆ

ಊಟ ಮಾಡುವಾಗ ಇಬ್ಬರ ನಡುವೆ ಗಲಾಟೆ ನಡೆದು, ವ್ಯಕ್ತಿಯೊಬ್ಬರನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ವೈಟ್‌ಫೀಲ್ಡ್‌ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯಲ್ಲಿ ನಡೆದಿದೆ. ಎಸ್‌.ಮೆಹಬೂಬ್‌ ಬಾಷಾ (59) ಕೊಲೆಯಾದವರು. ಕೃತ್ಯ ಎಸಗಿದ ಸುಂದರಮೂರ್ತಿ ವಿರುದ್ಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೆಹಬೂಬ್ ಬಾಷಾ ಅವರ ಪುತ್ರಿ ಸಬೀಹಾ ಅವರು ದೂರು ನೀಡಿದ್ಧಾರೆ ಎಂದು ಪೊಲೀಸರು ಹೇಳಿದರು. ಮೆಹಬೂಬ್‌ ಬಾಷಾ ಅವರಿಗೆ ವಿಪರೀತ ಮದ್ಯ ಸೇವಿಸುವ ಅಭ್ಯಾಸವಿತ್ತು. ಭಾನುವಾರ ಸಹ ವಿಪರೀತ ಮದ್ಯ ಸೇವಿಸಿದ್ದರು. ರಾತ್ರಿ 9.30ರ ಸುಮಾರಿಗೆ ಊಟ ಮಾಡುವಾಗ ಸುಂದರ ರಾಜ್ ಅವರೊಂದಿಗೆ ಗಲಾಟೆ ನಡೆದು, ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *