ಅಪ್ರಾಪ್ತ ಬಾಲಕರನ್ನೇ ಟಾರ್ಗೆಟ್ ಮಾಡಿ ಹಣ ವಸೂಲಿ ಆರೋಪ..! ಠಾಣೆ ಹತ್ತಿರಕ್ಕೆ ಕರೆದೊಯ್ದು ಏನಾಗುತ್ತಿದೆ..? ಜನರಲ್ಲಿ ಭಾರೀ ಆಕ್ರೋಶ..!
ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಪೊಲೀಸರ ವಿರುದ್ಧ ಕೇಳಿಬರುತ್ತಿರುವ ಗಂಭೀರ ಆರೋಪಗಳು ಇದೀಗ ಸಾರ್ವಜನಿಕರಲ್ಲಿ ಭಾರೀ ಚರ್ಚೆ, ಆಕ್ರೋಶ ಮತ್ತು ಅನುಮಾನಕ್ಕೆ ಕಾರಣವಾಗಿವೆ. ಕಾನೂನು ಕಾಪಾಡಬೇಕಾದವರೇ ಕಾನೂನು ಮೀರಿ ನಡೆಯುತ್ತಿದ್ದಾರಾ..?
ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ… ನಗರ ಒಳಭಾಗದಿಂದ ರಿಂಗ್ ರೋಡ್‌ವರೆಗೆ ವಾಹನ ತಪಾಸಣೆ ಹೆಸರಿನಲ್ಲಿ ಬೈಕ್ ಸವಾರರಿಗೆ ಕಿರುಕುಳ, ಬೆದರಿಕೆ ಹಾಗೂ ಹಣ ವಸೂಲಿ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳ ಮಧ್ಯೆ, ಜಾಕೆಟ್ ಧರಿಸಿ ಕಾರ್ಯನಿರ್ವಹಿಸುವ ಇಬ್ಬರು ಟ್ರಾಫಿಕ್ ಕಾನ್ಸ್ಟೇಬಲ್‌ಗಳ ವಿರುದ್ಧ ಸ್ಫೋಟಕ ಆರೋಪಗಳು ಕೇಳಿಬರುತ್ತಿವೆ…
ವಿಶೇಷವಾಗಿ ಅಪ್ರಾಪ್ತ ಬಾಲಕರನ್ನೇ ಟಾರ್ಗೆಟ್ ಮಾಡಿ, “ಕೇಸ್ ಆದರೆ ₹25,000 ದಂಡ ಬೀಳುತ್ತೆ… ಇಲ್ಲವೇ ಇಲ್ಲೇ ₹1000–₹2000 ಕೊಡಿ” ಎಂದು ಬೆದರಿಸಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಜನರನ್ನು ಬೆಚ್ಚಿ ಬೀಳಿಸಿವೆ…
ಇದೀಗ ಸಾರ್ವಜನಿಕರಲ್ಲಿ ಒಂದೇ ಪ್ರಶ್ನೆ— ಟ್ರಾಫಿಕ್ ಎಎಸ್ಐ (ASI) ಮಟ್ಟದ ಅಧಿಕಾರಿಗಳಿಗೆ ವಾಹನ ತಪಾಸಣೆ ಹಾಗೂ ಕಾನೂನು ಪ್ರಕ್ರಿಯೆ ನಡೆಸುವ ಅಧಿಕಾರ ಇದ್ದಾಗ, ಕಾನ್ಸ್ಟೇಬಲ್‌ಗಳು ಯಾವ ಅಧಿಕಾರದಡಿ ವಾಹನ ತಡೆದು ದಬ್ಬಾಳಿಕೆ ಮಾಡುತ್ತಿದ್ದಾರೆ..?
ಇವರ ಜೊತೆ ಎಎಸ್ಐ (ASI) ಅಥವಾ ಹಿರಿಯ ಅಧಿಕಾರಿಗಳೇ ಇಲ್ಲದಿದ್ದರೂ ಅಪ್ರಾಪ್ತ ಬಾಲಕರನ್ನೇ ಟಾರ್ಗೆಟ್ ಮಾಡುತ್ತಿರುವುದೇಕೆ..? ವಾಹನ ಹಿಡಿದು ಪೊಲೀಸ್ ಠಾಣೆ ಹತ್ತಿರಕ್ಕೆ ಕರೆದೊಯ್ದು ಅಲ್ಲಿ ಏನು ನಡೆಯುತ್ತಿದೆ..?
ಎಷ್ಟು ಜನರಿಂದ ಹಣ ಪಡೆದು ಬಿಟ್ಟುಕಳಿಸಲಾಗಿದೆ..? ಈ ಎಲ್ಲದಕ್ಕೂ ಸಂಬಂಧಪಟ್ಟ ಇನ್ಸ್ಪೆಕ್ಟರ್ ಮೌನ ಸಾಥ್ ಕೊಡ್ತಿದ್ದಾರಾ..? ಅಥವಾ ಗಮನವೇ ಇಲ್ವಾ..?

ಇದಕ್ಕೆ ಉತ್ತರ ಸಿಗಬೇಕಾದರೆ ಸಿಸಿಟಿವಿ, ಸ್ಥಳೀಯ ಕ್ಯಾಮೆರಾ ದೃಶ್ಯಗಳು ಹಾಗೂ ಸಾರ್ವಜನಿಕರ ಮೊಬೈಲ್ ವೀಡಿಯೋಗಳನ್ನು ತಕ್ಷಣ ಪರಿಶೀಲಿಸಬೇಕು ಎಂಬ ಒತ್ತಾಯ ದಿನದಿಂದ ದಿನಕ್ಕೆ ಜೋರಾಗುತ್ತಿದೆ… ಇನ್ನೊಂದು ಗಂಭೀರ ಆರೋಪ ಏನೆಂದರೆ ಸಮವಸ್ತ್ರದ ಮೇಲೆ ಜಾಕೆಟ್ ಧರಿಸಿ ಗುರುತು ಸ್ಪಷ್ಟ ಕಾಣದಂತೆ ಕಾರ್ಯನಿರ್ವಹಿಸುತ್ತಿರುವುದೇಕೆ..?
ಪೊಲೀಸ್ ಗುರುತು ಮುಚ್ಚಿಕೊಂಡು ಕಾರ್ಯನಿರ್ವಹಿಸುವ ಅಗತ್ಯ ಏನು..? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಿಡಿ ಹಚ್ಚಿದೆ… ಸಾರ್ವಜನಿಕರು ಎತ್ತುತ್ತಿರುವ ಕಠಿಣ ಪ್ರಶ್ನೆಗಳು: ಬೆದರಿಕೆ ಮೂಲಕ ಹಣ ವಸೂಲಿ ಮಾಡುವುದು ಅಪರಾಧ ಅಧಿಕಾರ ಮೀರಿದ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಅಪ್ರಾಪ್ತ ಬಾಲಕರ ಮೇಲೆ ಒತ್ತಡ ತರುವುದು ಗಂಭೀರ ವಿಷಯ ಪೊಲೀಸ್ ಅಧಿಕಾರ ದುರುಪಯೋಗದ ಆರೋಪಗಳಿದ್ದರೆ ತಕ್ಷಣ ತನಿಖೆ ಕಡ್ಡಾಯ
ಜನರ ಖಡಕ್ ಆಗ್ರಹ: ಈ ಇಬ್ಬರು ಟ್ರಾಫಿಕ್ ಕಾನ್ಸ್ಟೇಬಲ್‌ಗಳನ್ನು ತಕ್ಷಣ ಸಸ್ಪೆಂಡ್ ಮಾಡಬೇಕು ಇವರಿಗೆ ಮೌನ ಸಾಥ್ ಕೊಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿರುವ ಸಂಬಂಧಪಟ್ಟ ಇನ್ಸ್ಪೆಕ್ಟರ್‌ನನ್ನೂ ಸಸ್ಪೆಂಡ್ ಮಾಡಿ ತನಿಖೆ ನಡೆಸಬೇಕು ಸಿಸಿಟಿವಿ ಹಾಗೂ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಆರೋಪ ಸತ್ಯವಾದರೆ ಇಲಾಖೆಯಿಂದ ಖಡಕ್ ಕ್ರಮ ಕೈಗೊಂಡು ಮಾದರಿ ಶಿಕ್ಷೆ ನೀಡಬೇಕು ಅಪ್ರಾಪ್ತ ಬಾಲಕರನ್ನು ಟಾರ್ಗೆಟ್ ಮಾಡುವ ದಂಧೆಗೆ ಶಾಶ್ವತ ಬ್ರೇಕ್ ಹಾಕಬೇಕು..
ಡಿಜಿ ಮಟ್ಟದಲ್ಲಿ ಕಿರುಕುಳ, ಅನಗತ್ಯ ವಾಹನ ತಪಾಸಣೆ ಹಾಗೂ ಅಧಿಕಾರ ದುರುಪಯೋಗಕ್ಕೆ ಕಟ್ಟುನಿಟ್ಟಿನ ಸೂಚನೆಗಳಿದ್ದರೂ, ಕೆಲ ಸಿಬ್ಬಂದಿ ಅದನ್ನೇ ಗಾಳಿಗೆ ತೂರ್ತಿದ್ದಾರಾ..? ಎಂಬ ಪ್ರಶ್ನೆ ಈಗ ಜನರಲ್ಲಿ ಆಕ್ರೋಶದ ಅಲೆ ಎಬ್ಬಿಸಿದೆ. ಕಾನೂನು ಕಾಯಬೇಕಾದವರ ಮೇಲೆಯೇ ಇಂತಹ ಗಂಭೀರ ಆರೋಪಗಳು ಕೇಳಿಬರುತ್ತಿರುವಾಗ, ಮೇಲಾಧಿಕಾರಿಗಳು ಇನ್ನೂ ಮೌನವಾಗಿರ್ತಾರಾ..? ಅಥವಾ ತಕ್ಷಣ ಎಚ್ಚೆತ್ತು ಈ ಇಬ್ಬರು ಕಾನ್ಸ್ಟೇಬಲ್‌ಗಳನ್ನೂ, ಅವರಿಗೆ ಸಾಥ್ ಕೊಡುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್‌ನನ್ನೂ ಸಸ್ಪೆಂಡ್ ಮಾಡಿ ಕಾನೂನಿಗೆ ಗೌರವ ತರುತ್ತಾರಾ..? ಅನ್ನೋದನ್ನು ಕಾದು ನೋಡಬೇಕಾಗಿದೆ..!
bigtvnews | Hubli Dharwad News | Kannada News | Karnataka News Hubli News | News In Hubli | Local news

