Breaking News

ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ 2.92 ಲಕ್ಷ ರೂ. ವಂಚನೆ: ದೂರು

ಮಂಗಳೂರು: ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ ಮಹಿಳೆಯೊಬ್ಬರಿಗೆ 2.94 ಲಕ್ಷ ರೂ. ವಂಚಿಸಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರ ಮಹಿಳೆ ಮೇ 22ರಂದು ಬ್ಯಾಂಕೊಂದರ ಪುತ್ತೂರು ಶಾಖೆಯಲ್ಲಿ 2.94 ಲಕ್ಷ ರೂ. ಗೋಲ್ಡ್ ಲೋನ್ ಪಡೆದಿದ್ದರು. ಜೂನ್ ತಿಂಗಳಿನಿಂದ ಪ್ರತೀ ತಿಂಗಳ 6 ಸಾವಿರ ರೂ.ಇಎಂಐ ಪಡೆಯುವ ಬಗ್ಗೆ ಬ್ಯಾಕ್ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಆದರೆ ಮೇ 22ರಂದೇ 6 ಸಾವಿರ ರೂ. ಕಡಿತವಾಗಿದೆ. ಆ ಹಣವನ್ನು ವಾಪಾಸು ಪಡೆಯುವ ನಿಟ್ಟಿನಲ್ಲಿ ಆನ್ ಲೈನ್ ನಲ್ಲಿ ಬ್ಯಾಂಕ್ ಶಾಖೆ ಫೋನ್ ನಂಬರ್ ಹುಡುಕಿ ಬ್ರ್ಯಾಂಚ್ ಮ್ಯಾನೇಜರ್‌ಗೆ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸದೆ ಕಟ್ ಆಗಿದೆ. ಅನಂತರ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ವಿಚಾರಿಸಿದಾಗ ಪುತ್ತೂರು ಶಾಖೆಯ ಮ್ಯಾನೇಜರ್ ಎಂದು ಕರೆ ಮಾಡಿದ ವ್ಯಕ್ತಿ ತಿಳಿಸಿದ್ದಾನೆ. ಆತ ಸ್ಕ್ರೀನ್‌ ಸ್ಟಾರ್ಟ್ ಬಟನ್ ಕ್ಲಿಕ್ ಮಾಡುವಂತೆ ತಿಳಿಸಿದ್ದು ಅದರಂತೆ ಮಹಿಳೆ ಕ್ಲಿಕ್ ಮಾಡಿದ್ದಾರೆ. ಆಗ ಫೋನ್‌ಪೇ ಮೂಲಕ 94,000 ರೂ. ಹಣ ಖಾತೆಯಿಂದ ಕಟ್ ಆಗಿದೆ. ಕರೆಯಲ್ಲಿದ್ದಾಗಲೇ ಬ್ಯಾಂಕ್ ಆಯಪ್ ತೆರೆಯಿರಿ ಹಣ ವಾಪಾಸು ಬರುತ್ತದೆ ಎಂದು ತಿಳಿಸಿದ್ದಾನೆ. ಅದರಂತೆ ಆಯಪ್ ಓಪನ್ ಮಾಡಿದ್ದು, ಆಗ ಖಾತೆಯಿಂದ 1.98 ಲಕ್ಷ ರೂ. ವರ್ಗಾವಣೆಯಾಗಿದೆ. ಈ ರೀತಿ ಒಟ್ಟು 2.92 ಲಕ್ಷ ರೂ. ಹಣವನ್ನು ಅಪರಿಚಿತ ವ್ಯಕ್ತಿಗಳು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಮೋಸಗೊಂಡ ಹಣ ವಾಪಸು ಕೊಡಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *