ಬೆಂಗಳೂರು ನಗರದಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ಯುವತಿಯ ಮೋಹದ ಬಲೆಗೆ ಬಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು 1.66 ಕೋಟಿ ರೂ. ವಂಚನೆಗೆ ಒಳಗಾದ ಘಟನೆ ಬೆಳಕಿಗೆ ಬಂದಿದೆ. ಮದುವೆಯ ಆಮಿಷವೊಡ್ಡಿ ಶೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ಸೈಬರ್ ವಂಚಕಿ ಹಣ ಪಡೆದು ಪರಾರಿಯಾಗಿದ್ದಾಳೆ. ‘ಟಾಂಟಾಂ’ ಡೇಟಿಂಗ್ ಆಯಪ್‌ನಲ್ಲಿ ಪರಿಚಯವಾದ ‘ರಿಯಾ ಅಗರ್ವಾಲ್’ ಎಂಬ ಯುವತಿ, ಟೆಕ್ಕಿಯೊಂದಿಗೆ ಸ್ನೇಹ ಬೆಳೆಸಿ ಬಳಿಕ ವಾಟ್ಸ್ಯಾಪ್ ಹಾಗೂ ಟೆಲಿಗ್ರಾಂ ಮೂಲಕ ಸಂಪರ್ಕದಲ್ಲಿದ್ದಳು. ನಂತರ ಹೆಚ್ಚಿನ ಲಾಭದ ಭರವಸೆ ನೀಡಿ ನಕಲಿ ಹೂಡಿಕೆ ಲಿಂಕ್‌ಗಳನ್ನು ಕಳುಹಿಸಿ, ಫೆಬ್ರವರಿಯಿಂದ ಮೇ ವರೆಗೆ 26ಕ್ಕೂ ಹೆಚ್ಚು ವಹಿವಾಟುಗಳ ಮೂಲಕ 1.66 ಕೋಟಿ ರೂ. ಹಣ ವರ್ಗಾಯಿಸಿಸಿಕೊಂಡಿದ್ದಾಳೆ. ಹಣ ಹಿಂಪಡೆಯಲು ಯತ್ನಿಸಿದಾಗ ತಾಂತ್ರಿಕ ಸಮಸ್ಯೆ ನೆಪ ಹೇಳಿ ಬಳಿಕ ವಾಟ್ಸ್ಯಾಪ್ ಹಾಗೂ ಟೆಲಿಗ್ರಾಂ ಖಾತೆಗಳನ್ನು ಡಿಲೀಟ್ ಮಾಡಿ ಸಂಪರ್ಕ ಕಡಿತಗೊಳಿಸಿದ್ದಾಳೆ. ವಂಚನೆ ಅರಿತ ಟೆಕ್ಕಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳು ಬಳಸಿದ ಬ್ಯಾಂಕ್ ಖಾತೆಗಳ ಜಾಡು ಹಿಡಿದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

