ಹುಬ್ಬಳ್ಳಿ: ವಿವಿಧ ಕಂಪನಿಗಳ ಸ್ಟಾಕ್‌ಗಳನ್ನು ಖರೀದಿಸಿ ಮತ್ತು ಅವುಗಳನ್ನು ಮಾರಾಟ ಮಾಡಿ ಹೆಚ್ಚು ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿದ ಅಪರಿಚಿತರು, ನಗರದ ಪ್ರವೀಣ ಕಲಮನಿ ಎಂಬುವರಿಗೆ ₹21.01 ಲಕ್ಷ ವಂಚಿಸಿದ್ದಾರೆ. ಪ್ರವೀಣ ಅವರ ವಾಟ್ಸ್‌ಆಯಪ್ ಸಂಖ್ಯೆಯನ್ನು ‘ಇನ್ವೆಸ್ಟ್‌ಮೆಂಟ್ ಕ್ಲಬ್ ವಾಟ್ಸ್‌ಆಪ್ ಗ್ರೂಪ್’ಗೆ ಸೇರಿಸಿರುವ ವಂಚಕರು, ಬಳಿಕ ಲಿಂಕ್‌ವೊಂದನ್ನು ಅವರಿಗೆ ಕಳುಹಿಸಿ ಮೊಬೈಲ್ ಆಯಪ್ ಡೌನ್‌ಲೋಡ್ ಮಾಡಿಸಿದ್ದಾರೆ. ನಂತರ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

