Breaking News

ಅ. 25 ರಂದು ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಚುನಾವಣೆ

ನವಲಗುಂದ :ನಗರದ ದೇಸಾಯಿ ಪೇಟೆ ಉರ್ದು ಶಾಲೆಯಲ್ಲಿ ಇಲ್ಲಿನ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಚುನಾವಣೆ ಇದೆ 25 ಭಾನುವಾರ ಜರುಗಲಿದ್ದು ಸಮಸ್ತ 21 ಜಮಾತಿ ಹಿರಿಯರ ಒಪ್ಪಿಗೆ ಮೇರೆಗೆ ಸ್ಪರ್ದಿಸಿದ 21 ಸದಸ್ಯರ ನಮ್ಮ ತಂಡಕ್ಕೆ ಮತಚಲಾಯಿಸುವಂತೆ ಅಭ್ಯರ್ಥಿ ಸಯ್ಯದ ಅಮಾನುಲ್ಲಾ ಖಾಜಿ ಮುಸ್ಲಿಂ ಬಾಂದವರಲ್ಲಿ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನಮ್ಮ 21 ಜನರ ತಂಡವು ರಾಜ್ಯ ಮತ್ತು ಕೇಂದ್ರ ಸರ್ಕಾರ ಸಹಯೋಗದಿಂದ ಅಂಜುಮನ್ ಸಂಸ್ಥೆಯಿಂದ ನೂತನ ಬೃಹತ್ ಪ್ರಮಾಣದ ಶಾದಿ ಮಹಲ ಹಾಗೂ ಅಂಜುಮನ್ ಶಿಕ್ಷಣ ಸಂಸ್ಥೆಯನ್ನು ಪ್ರಾರಂಬಿಸುವದು, ಪ್ರತಿ ವರ್ಷ ಸಾಮೂಹಿಕ ವಿವಾಹ, ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುವದು ಹಾಗೂ ಸಮಾಜದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವದು ಮುಸ್ಲಿಂ ಭಾಂದವರಿಗೆ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗುವುದು ಎಂದರು. ಇತರರು ಉಪಸ್ಥಿತರಿದ್ದರು..

Share News

About Shaikh BigTv

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *