Breaking News

ತಂದೆ ನೀರಿನಲ್ಲಿ ಮುಳುಗುತ್ತಿದ್ದರೆ, ಅಸಹಾಯಕನಾಗಿ ವಿಡಿಯೋ ಮಾಡುತ್ತಿದ್ದ ಮಗ! ಭೀಕರ ದೃಶ್ಯ ವೈರಲ್

ಕಲಬುರ್ಗಿ : ಮಗನ ಕಣ್ಣೆದುರೇ ತಂದೆಯೊಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಭೀಕರ ಹಾಗೂ ಆಘಾತಕಾರಿ ಘಟನೆಯೊಂದು ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಗ್ರಾಮದಲ್ಲಿ ವರದಿಯಾಗಿದೆ. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಗ್ರಾಮದ ಬಳಿ ಹರಿಯುವ ಭೀಮಾ ನದಿಯಲ್ಲಿ ಘಟನೆ ನಡೆದಿದೆ. ವಿಜಯ್ ರಾಜು ಎಂಬುವವರು ತಮ್ಮ ಎಮ್ಮೆಯನ್ನು ವಾಪಸ್ ಕರೆತರುವ ಸಲುವಾಗಿ ನದಿಗೆ ಇಳಿದಿದ್ದರು. ನದಿ ದಾಟಲು ಯತ್ನಿಸಿದ ವಿಜಯ್ ರಾಜು ಅವರಿಗೆ ಈಜಲು ಬಾರದಿರುವ ಕಾರಣ, ನೀರಿನ ಸೆಳೆತಕ್ಕೆ ಸಿಲುಕಿ ನಿಯಂತ್ರಣ ಕಳೆದುಕೊಂಡು ಮುಳುಗಲು ಪ್ರಾರಂಭಿಸಿದರು. ನದಿಯ ಮಧ್ಯಭಾಗದಿಂದ “ಕಾಪಾಡಿ, ಕಾಪಾಡಿ” ಎಂದು ಕೂಗುತ್ತಾ ಅವರು ಕೈಕಾಲು ಬಡಿಯುತ್ತಿದ್ದರೂ, ದಡದ ಮೇಲೆ ಇದ್ದ ಮಗನಿಗೆ ಏನು ಮಾಡಬೇಕೆಂದು ತೋಚದೆ ಅಸಹಾಯಕನಾಗಿ ನಿಲ್ಲಬೇಕಾಯಿತು. ದುರದೃಷ್ಟವಶಾತ್, ತಂದೆ ಪ್ರಾಣ ಬಿಡುವ ಅಂತಿಮ ಭೀಕರ ಕ್ಷಣಗಳು ಮಗನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮಗನ ಕಣ್ಣೆದುರೇ ತಂದೆ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿ ಸಾವನ್ನಪ್ಪಿದ ಈ ದೃಶ್ಯ ನೋಡುಗರ ಎದೆ ನಡುಗಿಸುವಂತಿದೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *