ಹುಬ್ಬಳ್ಳಿ: ಸತತ ಸುರಿಯುತ್ತಿರುವ ಮಳೆಯಿಂದಾಗಿ ಶಿಥಿಲವಾಗಿದ್ದ ಸೇತುವೆ ಮೇಲೆ 16 ಚಕ್ರಗಳ ಲಾರಿಯೊಂದು ದಾಟುವ ವೇಳೆ ಸೇತುವೆ ಕುಸಿದು ಸಿಲುಕಿದ ಘಟನೆ ಹುಬ್ಬಳಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ನಗರದ ಕಮರಿಪೇಟೆ ಪೊಲೀಸ ಠಾಣೆ ಹಿಂದಿನ ಕಮರಿಪೇಟದಿಂದ ತುಮಕೂರಗಲ್ಲಿ ಹೋಗುವ ರಸ್ತೆಯಲ್ಲಿ ನಾಲಾ ಮೇಲೆ ಅಡ್ಡವಾಗಿ ಕಟ್ಟಿರುವ ಸೇತುವೆ ಮೇಲೆ ರಾಜಸ್ಥಾನ್ ದಿಂದ ಹುಬ್ಬಳಿಗೆ ಪ್ಲೈವುಡ್ ಹೇರಿಕೊಂಡು ಬಂದ ಲಾರಿಯು ಸೇತುವೆ ಕುಸಿದಿದ್ದರಿಂದ ನಾಲಾ ದಲ್ಲಿ ಸಿಲುಕಿಕೊಂಡಿದೆ. ನಾಲಾ ಮೇಲೆ ಕಟ್ಟಿರುವ ಸೇತುವೆಯು 40 ವರ್ಷಕ್ಕೂ ಹಿಂದಿನದಾಗಿದ್ದು ನಾಲಾ ಸ್ವಚ್ಚ ಗೊಳಿಸುವದಕ್ಕಾಗಿ ಅರ್ಧ ಭಾಗವನ್ನು ತೆರುವು ಗೊಳಿಸಿದ್ದರಿಂದ ಉಳಿದ ಭಾಗ ಶಿಥಿಲಗೊಂಡಿತ್ತು ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





