Breaking News

ವಿಶೇಷ ಚೇತನ ಮಹಿಳೆಗೆ ಸೂರು: ಸಂತೋಷ್‌ ಲಾಡ್ ಭರವಸೆ

ಧಾರವಾಡ: ದೇವಸ್ಥಾನ ಕಟ್ಟೆಯೊಂದರ ಮೇಲೆ ತಾನು ವಾಸ ಮಾಡುತ್ತಿದ್ದು, ತನಗೆ ಸೂರು ಒದಗಿಸಬೇಕು ಎಂದು ವಿಶೇಷ ಚೇತನ ಮಹಿಳೆಯೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಮೊರೆ ಇಟ್ಟಿದ್ದಾರೆ.

ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಶಂಕ್ರಮ್ಮ ಏಣಗಿ ಎಂಬ ವಿಶೇಷ ಚೇತನ ಮಹಿಳೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಡೆಯುತ್ತಿದ್ದ ಸಚಿವ ಸಂತೋಷ ಲಾಡ್ ಅವರ ಜನತಾ ದರ್ಶನ ಕಾರ್ಯಕ್ರಮಕ್ಕೆ ಬಂದು ತನಗೆ ಸೂರು ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಎರಡೂ ಕಾಲು ಕಳೆದುಕೊಂಡಿರುವ ಮಹಿಳೆ ಕೈಗಳ ಸಹಾಯದಿಂದಲೇ ನಡೆದಾಡುತ್ತಾರೆ. ತಾನು ಚಿಕ್ಕಮಲ್ಲಿಗವಾಡ ಗ್ರಾಮದ ದೇವಸ್ಥಾನದ ಕಟ್ಟೆಯೊಂದರ ಮೇಲೆ ವಾಸ ಮಾಡುತ್ತಿದ್ದು, ತನಗೆ ಸೂರು ಒದಗಿಸಬೇಕು ಎಂದು ಮನವಿ ಸಲ್ಲಿಸಿದ್ದರು. ಇವರ ಸಮಸ್ಯೆಯನ್ನು ಸೌಜನ್ಯದಿಂದ ಆಲಿಸಿದ ಸಚಿವ ಲಾಡ್, ಸೂರು ಒದಗಿಸುವ ಭರವಸೆ ನೀಡಿದ್ದಾರೆ.

ಇನ್ನು ಕಾರ್ಯಕ್ರಮದುದ್ದಕ್ಕೂ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸಚಿವ ಸಂತೋಷ ಲಾಡ್ ಅವರು ಬರಿಗಾಲಿನಲ್ಲಿ ನಿಂತು ಸರಳತೆಯನ್ನು ಮೆರೆದಿದ್ದಾರೆ. ಅವರ ಸರಳತೆಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ

Share News

About BigTv News

Check Also

ಧಾರವಾಡದಲ್ಲಿ ಜಮೀನು ವಿವಾದಕ್ಕೆ ಗುಂಡಿನ ದಾಳಿ: ಐವರು ಆರೋಪಿಗಳ ಬಂಧನ

ಧಾರವಾಡದ ತರಸಿನಕೊಪ್ಪ ಪ್ರದೇಶದಲ್ಲಿ ಜಮೀನು ವಿವಾದದ ಹಿನ್ನೆಲೆ ಎರಡು ಗುಂಪುಗಳ ನಡುವೆ ಭೀಕರ ಗಲಾಟೆ ನಡೆದು ಗುಂಡಿನ ದಾಳಿ ಸಂಭವಿಸಿದೆ. …

Leave a Reply

Your email address will not be published. Required fields are marked *