Breaking News

ಕೇರಳಂ: ಪೊಲೀಸರ ತಪಾಸಣೆ ವೇಳೆ ಕುಕ್ಕರ್‌ನಲ್ಲಿ ಗಾಂಜಾ ಅಡಗಿಸಿಟ್ಟವನ ಬಂಧನ

ಮಾದಕವಸ್ತು ನಿಗ್ರಹ ಕಾರ್ಯಾಚರಣೆ ಕುಕ್ಕರ್‌ನಲ್ಲಿ ಗಾಂಜಾ ಅಡಗಿಸಿಟ್ಟ ವ್ಯಕ್ತಿಯನ್ನು ಶನಿವಾರ ಕುನ್ನಂಕುಲಂ ಪ್ರದೇಶದಲ್ಲಿ ಬಂಧಿಸಲಾಗಿದೆ. ಶನಿವಾರ ಮಧ್ಯಾಹ್ನ ಕುನ್ನಂಕುಲಂ ಸಮೀಪದ ಅಡುಪುಟ್ಟಿಯ ಬಿನೇಶ್(40)ರವರ ಮನೆಯಲ್ಲಿ ಈ ಘಟನೆ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿನೇಶ್‌ರವರ ಮನೆಯಲ್ಲಿ ಗಾಂಜಾ ಸಂಗ್ರಹಿಸಲಾಗಿದೆ ಎಂಬ ಸುಳಿವು ದೊರೆತ ನಂತರ ಕುನ್ನಂಕುಲಂ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರು ಮನೆ ಬರುವುದನ್ನು ಅರಿತ ಬಿನೇಶ್, ಒಲೆ ಮೇಲೆ ಅನ್ನ ಬೇಯಿಸುತ್ತಿದ್ದ ಕುಕ್ಕರ್‌ನಲ್ಲಿ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿದ್ದ ಮಾದಕವಸ್ತುವನ್ನು ಇರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರಂಭದಲ್ಲಿ ಮನೆಯೆಲ್ಲಾ ಹುಡುಕಿದರೂ ಪೊಲೀಸರಿಗೆ ಮಾದಕವಸ್ತು ಸಿಗಲ್ಲಿಲ್ಲ. ಆದರೆ ಕುಕ್ಕರ್ ಶಿಳ್ಳೆ ಹೊಡೆದಾಗ ಗಾಂಜಾ ವಾಸನೆ ಬಂದಿದೆ. ಒಲೆಯಿಂದ ಕುಕ್ಕರ್‌ ಇಳಿಸಿದ ‍ಪೊಲೀಸರು ಪರಿಶೀಲನೆ ನಡೆಸಿದಾಗ ಬೇಯಿಸಿದ ಅನ್ನದ ಒಳಗೆ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ 401ಗ್ರಾಂ ಗಾಂಜಾ ಕಂಡುಬಂದಿದೆ. ಬಿನೇಶ್ ಈ ಹಿಂದೆ ಗಾಂಜಾ ಮಾರಾಟದಲ್ಲಿ ಭಾಗಿಯಾಗಿದ್ದ. ಈ ಹಿಂದೆ ಕ್ರಿಮಿನಲ್ ಪ್ರಕರಣವೂ ದಾಖಲಾಗಿತ್ತು. ಮಾದಕವಸ್ತು ನಿಷೇಧ ಕಾಯ್ದೆಯಡಿ ಆರೋಪಿಯನ್ನು ಕುನ್ನಂಕುಲಂ ಪೊಲೀಸರು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *