ಕಾಂಗ್ರೆಸ್' ಸತ್ಯಶೋಧನಾ ಸಭೆಯಲ್ಲಿ 'ಕೈ' ಕೈ' ವಾಗ್ವಾದ!

ಧಾರವಾಡ :ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿನ ಕುರಿತು ಮಾಹಿತಿ ಕಲೆ ಹಾಕಲು ಗುರುವಾರ ನಗರದ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ಸತ್ಯಶೋಧನಾ ಸಭೆಯಲ್ಲಿ ಮುಸ್ಲಿಂ ಸಮಾಜದ ಯುವ ಮುಖಂಡ ಇಮ್ರಾನ್ ಕಳ್ಳಿಮನಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.ಗುರುವಾರ ನಡೆದ ಸಭೆಯಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ, ವೀರಕುಮಾರ್ ಪಾಟೀಲ, ವೀರಣ್ಣ ಮತ್ತಿಕಟ್ಟಿ, ಎ.ಎಂ. ಹಿಂಡಸಗೇರಿ ಸಮ್ಮುಖದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿನ ಕುರಿತು ಇಮ್ರಾನ್ ಕಳ್ಳಿಮನಿ ಅವರು ಮುಸ್ಲಿಂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಿಂದಾಗಿ ಹಿನ್ನಡೆ ಆಗಿದೆ ಎಂದು ತಮ್ಮ ಭಾವನೆಗಳನ್ನು ಹೊರ ಹಾಕಿದರು.ಇದರಿಂದ ಕುಪಿತಗೊಂಡ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಆಪ್ತ ಸಹಾಯಕ ಪ್ರಶಾಂತ ಕೇಕರೆ ಹಾಗೂ ಕೆಲ ಕಾಂಗ್ರೆಸ್ ಮುಖಂಡರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಇಮ್ರಾನ್ ಕಳ್ಳಿಮನಿ ಅವರನ್ನು ಹಿಡಿದು ಎಳೆದಾಡಿದರು. ಅಲ್ಲದೆ, ಜಾತಿ ವಿಷಯವನ್ನು ಪ್ರಸ್ತಾಪಿಸಿದಂತೆ ತಾಕೀತು ಮಾಡಿದರು.ಸಭೆಯಲ್ಲಿಕೆಂಡಾಮಂಡಲವಾದ ಬಸವರಾಜ ರಾಯರಡ್ಡಿ ಅವರು ಸರಿಯಾಗಿಯೇ ಹೇಳುತ್ತಿದ್ದಾರೆ. ಅವರಿಗೆ ಮುಕ್ತವಾಗಿ ಮಾತನಾಡಲು ಬಿಡಿ,ಗಲಾಟೆ ಮಾಡುವುದಾದರೆ ಸಭೆಯಿಂದ ಹೊರ ನಡೆಯಿರಿ ಎಂದು ಸೂಚನೆ ನೀಡಿದರು. ಅಷ್ಟಕ್ಕೂ ಶಿಸ್ತು ಮೀರಿದರೆ ಪಕ್ಷದಿಂದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಅಷ್ಟಕ್ಕೂ ಸುಮ್ಮನಾಗದ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಬೆಂಬಲಿಗರು ಇಮ್ರಾನ್ ಕಳ್ಳಿಮನಿ ಮೇಲೆ ಮುಗಿಬಿದ್ದು, ಹಲ್ಲೆ ನಡೆಸಿಯೇ ಬಿಟ್ಟರು. ಅವರನ್ನು ಹಿಡಿದು ಎಳೆದಾಡಿದ್ದರಿಂದ ಅವರ ಶರ್ಟನ್ನು ಹರಿದುಹೋಗಿದೆ.ನಂತರ ಸಭೆ ಉದ್ದೇಶಿಸಿ ಮಾತನಾಡಿದ ಬಸವರಾಜ ರಾಯರೆಡ್ಡಿ, ಸೋಲಿಗೆ ಕಾರಣಗಳ ಕುರಿತು ಮಾಹಿತಿ ಸಂಗ್ರಹಿಸಿ ಅಂತಿಮ ವರದಿ ತಯಾರಿಸಿ, ಅ. 2 ರಂದು ಕೆಪಿಸಿಸಿ ಅಧ್ಯಕ್ಷ ದಿನೇಶಗುಂಡೂರಾವ್‌ ಅವರಿಗೆ ಸಲ್ಲಿಸಲಾಗುವುದು’ ಆ. ಒಳಗೆ ಲೋಕಸಭಾ ಕ್ಷೇತ್ರಗಳ ಸೋಲಿನ ಬಗ್ಗೆ ಕಾರಣಗಳನ್ನು ತಿಳಿಯಲು ಸತ್ಯಶೋಧನಾ ಸಭೆ ಮಾಡಲಾಗುತ್ತಿದೆ. ಎಂದರುಇದು ನನಗೆ ತೀವ್ರ ನೋವು ತಂದಿದೆ. ಈ ಬಗ್ಗೆ ಕೆಪಿಸಿಸಿ, ಎಐಸಿಸಿ ಅಧ್ಯಕ್ಷರಿಗೆ ದೂರು ನೀಡಿ, ಕಾನೂನು ಹೋರಾಟ ನಡೆಸಲಾಗುವುದು ಎಂದುಮುಸ್ಲಿಂ ಸಮಾಜದ ಯುವ ಮುಖಂಡ ಇಮ್ರಾನ್ ಕಳ್ಳಿಮನಿ ಹೇಳಿದರು.ಇದರಿಂದ ಸಭೆಯಲ್ಲಿ ಕೆಲ ಕಾಲ ಗೊಂದಲದ ವಾತವರಣ ಉಂಟಾಗಿತ್ತು. ಅಲ್ಲದೆ, ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ನಾಯಕರು ವಿಚಲಿತರಾಗಿ ತಲೆ ತಗ್ಗಿಸುವಂತೆ ಆಯಿತು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಹೆಣಗಾಡಬೇಕಾಯಿತುಹಿರಿಯ ಮುಖಂಡ ವೀರಣ್ಣ ಮತ್ತಿಗಟ್ಟಿ, ವೀರಕುಮಾರ ಪಾಟೀಲ,ಅಲ್ತಾಫ್ ಹಳ್ಳೂರ, ಶಾಂತಮ್ಮ ಗುಜ್ಜಳ, ವಿನೋದ ಅಸೂಟಿ ,ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಧಾರವಾಡ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಇದ್ದರು.

Share News

About admin

Check Also

ನಿಯಂತ್ರಣ ತಪ್ಪಿದ ಚಾಲಕ : ವಿದ್ಯಾರ್ಥಿಗೆ ಗಂಭೀರ ಗಾಯ

ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ವೃತ್ತಕ್ಕೆ ಡಿಕ್ಕಿಯಾಗಿ ಧಾರವಾಡ ಎಸ್​ಡಿಎಂ ಎಂಬಿಬಿಎಸ್ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿ ಗಂಭೀರ …

Leave a Reply

Your email address will not be published. Required fields are marked *

You cannot copy content of this page