Breaking News

ಬೆಂಗಳೂರಲ್ಲಿ ಸೆಲ್ಫಿ ವಿಡಿಯೋ ಮಾಡಿ, ಹೋಂ ಗಾರ್ಡ್ ಪತ್ನಿಯನ್ನು ಬರ್ಬರವಾಗಿ ಕೊಂದ ಪತಿ!

ಬೆಂಗಳೂರಲ್ಲಿ ಬೆಟ್ಟಿಂಗ್ ಚಟಕ್ಕೆ ಪತ್ನಿಯನ್ನೇ ಭೀಕರವಾಗಿ ಪ್ರತಿಯೊಬ್ಬ ಕೊಲೆ ಮಾಡಿರುವ ಘಟನೆ ವರದಿಯಾಗಿದೆ ಸೆಲ್ಫಿ ವಿಡಿಯೋ ಮಾಡಿ ಹೋಂ ಗಾರ್ಡ್ ಪತ್ನಿಯ ಬರ ಕೊಲೆ ನಡೆದಿದೆ. ಮಾದೇವಪುರ ಪುಷ್ಪಾಂಜಲಿ ಥಿಯೇಟರ್ ಬಳಿ ಮನೆಯಲ್ಲಿ ಈ ಒಂದು ಘಟನೆ ನಡೆದಿದೆ. ಹೋಂ ಗಾರ್ಡ್ ಆಗಿದ್ದ ಮಂಜುಳಾ (32) ಕೊಲೆಗೈದ ಪತಿ ಪ್ರದೀಪ್ ಚಾಕುವಿನಿಂದ ಇರಿದು ಪತ್ನಿ ಮಂಜುಳಾಳನ್ನು ಪ್ರದೀಪ್ ಕೊಲೆ ಮಾಡಿದ್ದಾನೆ. ಕೃತ್ಯಕ್ಕೂ ಮೊದಲು ಕೊಲೆ ಮಾಡುವುದಾಗಿ ಪ್ರದೀಪ್ ಸೆಲ್ಫಿ ವಿಡಿಯೋ ಮಾಡಿದ್ದಾನೆ ಮಾದೇವಪುರದಲ್ಲಿ ನಿನ್ನೆ ರಾತ್ರಿ 9:00 ವೇಳೆ ಈ ಒಂದು ಕೊಲೆ ನಡೆದಿದೆ.ಕೊಲೆಯಾದ ಮಂಜುಳಾ ಮಹದೇವಪುರ ಠಾಣೆಯಲ್ಲಿ ಹೋಂ ಗಾರ್ಡ್ ಆಗಿದ್ದರು. ಪ್ರದೀಪ್ ಚಟದಿಂದ ಹೆಂಡತಿ ಮತ್ತು ಮಕ್ಕಳು ಬೀದಿಗೆ ಬಂದರು ನಾನು ಸಾಯ್ತಿನಿ ನನ್ನ ಹೆಂಡತಿಯು ಸಾಯುತ್ತಾಳೆ ಎಂದು ವಿಡಿಯೋ ಮಾಡಿದ್ದಾನೆ. ಅತ್ತೆ ಹಾಗೂ ನಾದಿನಿಂದ ನನ್ನ ಪತ್ನಿ ಮಂಜುಳಾ ಹಾಳಾದಳು ಎಂದು ವಿಡಿಯೋ ಮಾಡಿಟ್ಟು ಪತ್ನಿ ಹತ್ಯೆ ಮಾಡಿ ಪ್ರದೀಪ್ ಎಸ್ಕೇಪ್ ಆಗಿದ್ದಾನೆ. ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *