Breaking News

Karnataka Police: ಇನ್ನು ಶಾಸಕರ ‘ಮಿನಿಟ್’ಗೆ ಬ್ರೇಕ್..? ಪೊಲೀಸ್ ವರ್ಗಾವಣೆಯಲ್ಲಿ ಗೃಹ ಇಲಾಖೆಯ ಬಿಗ್ ಸರ್ಜರಿ..!

ರಾಜ್ಯ ಪೊಲೀಸ್ ಇಲಾಖೆಯಲ್ಲಿ ವರ್ಷಗಳಿಂದ ಕೇಳಿಬರುತ್ತಿರುವ..

ರಾಜಕೀಯ ನಾಯಕರ ಕೈಗೊಂಬೆ ಇನ್ಸ್‌ಪೆಕ್ಟರ್‌ಗಳಿಗೆ ಬ್ರೇಕ್..? ಪೊಲೀಸ್ ವರ್ಗಾವಣೆಯಲ್ಲಿ ಭಾರೀ ಸರ್ಜರಿ..!

ಶಾಸಕರ ಮಾತೇ ಕಾನೂನು ಎನ್ನುವ ಇನ್ಸ್‌ಪೆಕ್ಟರ್‌ಗಳಿಗೆ ಶಾಕ್..? ಪೊಲೀಸ್ ಇಲಾಖೆಯಲ್ಲಿ ಹೊಸ ಆಟ ಶುರು!

ರಾಜಕೀಯ ಕೈಗೊಂಬೆ ಪೊಲೀಸರಿಗೆ ಬ್ರೇಕ್..? ‘ಮಿನಿಟ್ ಪೊಲೀಸ್’ ವ್ಯವಸ್ಥೆಗೆ ಎಂಡ್ ಕಾರ್ಡ್ ಬರ್ತಾ..?

ಶಿಫಾರಸು ಪತ್ರ ರಾಜಕೀಯ ಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಕಾಣಿಸುತ್ತಿದೆ. ಇನ್ನು ಮುಂದೆ ಪೊಲೀಸ್ ವರ್ಗಾವಣೆಗಳಲ್ಲಿ ಶಾಸಕರ ಶಿಫಾರಸು ಪತ್ರಗಳಿಗಿಂತ ಪಾರದರ್ಶಕ ಕೌನ್ಸೆಲಿಂಗ್ ವ್ಯವಸ್ಥೆಗೆ ಆದ್ಯತೆ ನೀಡುವ ಬಗ್ಗೆ ಗೃಹ ಇಲಾಖೆ ಗಂಭೀರ ಚಿಂತನೆ ಆರಂಭಿಸಿದೆ ಎಂಬ ಮಾಹಿತಿ ರಾಜ್ಯ ರಾಜಕೀಯ ಮತ್ತು ಪೊಲೀಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ..

.ಸದ್ಯ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ PDOಗಳ ವರ್ಗಾವಣೆಯ ಮಾದರಿಯಲ್ಲೇ, ಪೊಲೀಸ್ ಇಲಾಖೆಯಲ್ಲೂ ಕೌನ್ಸೆಲಿಂಗ್ ಆಧಾರಿತ ವರ್ಗಾವಣೆ ವ್ಯವಸ್ಥೆ ಜಾರಿಗೆ ತರಲು ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ..

ವಿಶೇಷವಾಗಿ PSI, PI, DYSP/ACP ಹುದ್ದೆಗಳ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ, ಶಿಫಾರಸು ಪತ್ರ, ಪ್ರಭಾವ ಇತ್ಯಾದಿ ಆರೋಪಗಳು ಹೆಚ್ಚುತ್ತಿರುವ ಹಿನ್ನೆಲೆ, ಹೊಸ ವ್ಯವಸ್ಥೆ ತರಲು ಗೃಹ ಇಲಾಖೆ ಮುಂದಾಗಿದೆ…

ಈ ಸಂಬಂಧ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವ Priyank Kharge ಚರ್ಚೆ ನಡೆಸಿದ್ದು, ಹೊಸ ನೀತಿ ಜಾರಿಗೆ ಇರುವ ತಾಂತ್ರಿಕ ಅಡೆತಡೆಗಳು ಹಾಗೂ ಅನುಷ್ಠಾನದ ಸಾಧ್ಯತೆಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನಲಾಗಿದೆ…

2011ರ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಚನೆಯಾದ Police Establishment Board (PEB) ಇದ್ದರೂ, ವರ್ಗಾವಣೆಯಲ್ಲಿ ರಾಜಕೀಯ ಒತ್ತಡ ಸಂಪೂರ್ಣ ಕಡಿಮೆಯಾಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ…

ಹೀಗಾಗಿ ಇನ್ಸ್‌ಪೆಕ್ಟರ್‌ ಹಾಗೂ DYSP/ACP ಮಟ್ಟದ ಅಧಿಕಾರಿಗಳ ವರ್ಗಾವಣೆಗೆ ಅರ್ಹತೆ, ಸೇವಾ ಅವಧಿ, ಕಾರ್ಯಕ್ಷಮತೆ ಆಧಾರಿತ ಕೌನ್ಸೆಲಿಂಗ್ ವ್ಯವಸ್ಥೆ ತರಲು ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ…

ಇದೀಗ ಬೆಂಗಳೂರು ಕಮಿಷನರೇಟ್ ಸೇರಿದಂತೆ ಕೆಲ ವಲಯಗಳಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ಕಾನ್‌ಸ್ಟೇಬಲ್‌ಗಳ ವರ್ಗಾವಣೆಗೆ ಕೌನ್ಸೆಲಿಂಗ್ ಪದ್ಧತಿ ಜಾರಿಯಲ್ಲಿದೆ. ಇದೇ ಮಾದರಿಯನ್ನು ರಾಜ್ಯ ಮಟ್ಟದಲ್ಲೂ ವಿಸ್ತರಿಸುವ ಚರ್ಚೆ ನಡೆಯುತ್ತಿದೆ…

ಆದರೆ, ತಮ್ಮ ಕ್ಷೇತ್ರದಲ್ಲಿ ಬೇಕಾದ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿಸಿಕೊಳ್ಳುವುದು ರಾಜಕೀಯ ಬಲ ಎನ್ನುವ ನಂಬಿಕೆ ಕೆಲವು ಶಾಸಕರಲ್ಲಿರುವ ಕಾರಣ, ಶಾಸಕರು ಈ ಹೊಸ ನೀತಿಗೆ ಒಪ್ಪುತ್ತಾರಾ..? ಎಂಬ ಪ್ರಶ್ನೆಯೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ…

ಒಟ್ಟಿನಲ್ಲಿ — ಪೊಲೀಸ್ ವರ್ಗಾವಣೆಯಲ್ಲಿ ಮಿನಿಟ್ ರಾಜಕೀಯ’ಗೆ ಬ್ರೇಕ್ ಬಿದ್ದು, ಮೆರಿಟ್ ವ್ಯವಸ್ಥೆ’ ಜಾರಿಯಾಗುತ್ತದೆಯೇ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Share News

About Shaikh BigTv

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *