Breaking News

ಸಿಐಡಿ ಇನ್ಸ್ ಪೆಕ್ಟರ್ ನಿಂದಲೇ ದರೋಡೆ: ಬರೋಬ್ಬರಿ 20 ಲಕ್ಷ ದೋಚಿ ಪರಾರಿಯಾದ ಗ್ಯಾಂಗ್: ರಕ್ಷಕರೇ ಭಕ್ಷಕರಾದ ಕಥೆ

ಬೆಂಗಳೂರು: ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಕೇರಳ ಮೂಲದ ಉದ್ಯಮಿಗಳನ್ನು ಬೆದರಿಸಿ ₹20 ಲಕ್ಷ ದರೋಡೆ ಮಾಡಿದ ಪ್ರಕರಣದಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಹೆಸರು ಕೇಳಿಬಂದಿದೆ. ಇನ್ಸ್‌ಪೆಕ್ಟರ್ ಸೇರಿದಂತೆ ಕೆಲವರು ಪೊಲೀಸರ ಸೋಗಿನಲ್ಲಿ ಹೋಟೆಲ್ ಕೊಠಡಿಗೆ ನುಗ್ಗಿ, ಉದ್ಯಮಿಗಳಿಂದ ಹಣ ಕಸಿದುಕೊಂಡು ಪೊಲೀಸ್ ಜೀಪಿನಲ್ಲಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನ ಮೇರೆಗೆ ತನಿಖೆ ನಡೆಸಿದ ಮಡಿವಾಳ ಪೊಲೀಸರು ಕುಪೇಂದ್ರ ಎಂಬಾತನನ್ನು ಬಂಧಿಸಿದ್ದು, ವಿಚಾರಣೆ ವೇಳೆ ಪ್ರಕರಣದ ಪ್ರಮುಖ ಮಾಹಿತಿ ಬಹಿರಂಗವಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಶೋಧ ಮುಂದುವರಿದಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *