Breaking News

ಹಳೇ ಹುಬ್ಬಳ್ಳಿ ಪೊಲೀಸರ ಖಡಕ್ ಕಾರ್ಯಾಚರಣೆ: ಐವರು ಕಳ್ಳರನ್ನು ಬಂಧಿಸಿದ ಖಾಕಿ…!

ಹುಬ್ಬಳ್ಳಿ; ಹಳೇಹುಬ್ಬಳ್ಳಿ ಪೊಲೀಸರು ಕಾರ್ಯಾಚರಣೆ ಮೂಲಕ 2 ಜನ ಸರಗಳ್ಳರ ಹಾಗೂ 3 ಜನ ಮನೆ ಕಳ್ಳರ ಬಂಧಿಸಿದ್ದು, 4,02,250 ರೂ ಮೌಲ್ಯದ 78 ಗ್ರಾಂ ಚಿನ್ನ, 65 ಗ್ರಾಂ ಬೆಳ್ಳಿ ಹಾಗೂ ಒಂದು ಮೋಟಾರ ಸೈಕಲ್ ವಶಕ್ಕೆ ತೆಗೆದುಕೊಂಡಿದ್ದಾರೆ. ಹೌದು.. ಇತ್ತೀಚೆಗೆ ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹಾಗೂ ಮನೆ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಪ್ರಕರಣಗಳು ದಾಖಲಾಗಿದ್ದವು.

ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಎಚ್.ಯಳ್ಳೂರ, ಪಿ.ಎಸ್.ಐ ರೂಪಕ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಸರಗಳ್ಳರ ಹಾಗೂ ಮನೆಗಳ್ಳರ ಹೆಡೆಮುರಿ ಕಟ್ಟಿದ್ದಾರೆ.ಇನ್ನೂ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ವಿ.ಎಸ್.ಚವಡಿ, ಪಿ.ಬಿ.ಕಾಳೆ, ಎ.ಪಿ.ಕಟ್ನಳ್ಳಿ, ಐ.ಎಸ್.ಸಂಶಿ, ಎಸ್.ಎ.ವಲ್ಯಾಪೂರ, ಕೃಷ್ಣಾ.ಎನ್.ಮೋಟೆಬೆನ್ನೂರ, ಎನ್.ಎ.ಕೆಂಚಣ್ಣನವರ, ಬಿ.ಎಮ್.ಹೆದ್ದೇರಿ ಹಾಗೂ ವಿ.ಎ.ಹೊಸಳ್ಳಿಯವರು ಆರೋಪಿತರನ್ನು ಪತ್ತೆ ಹಚ್ಚಿ

ಕಳ್ಳತನವಾದ ಚಿನ್ನಾಭರಣ, ಬೆಳ್ಳಿಯ ಒಡವೆಗಳು ಹಾಗೂ ದೋಚಿಕೊಂಡು ಹೋಗಲು ಬಳಸಿದ ಮೋಟಾರ ಸೈಕಲ್ ವಶಕ್ಕೆ ಪಡೆದಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣಗಳ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿತರನ್ನು ಪತ್ತೆ ಮಾಡಿದ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ, ಪೊಲೀಸ್ ಸಬ್ ಇನ್ಸಪೆಕ್ಟರ, ಸಹಾಯಕ ಪೊಲೀಸ್ ಸಬ್ ಇನ್ಸಪೆಕ್ಟರ ಹಾಗೂ ಸಿಬ್ಬಂದಿಯವರ ಕಾರ್ಯವೈಖರಿ ಶ್ಲಾಘಿಸಿ, ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *