Breaking News

ಹುಬ್ಬಳ್ಳಿ: ಅನೈತಿಕ ಸಂಬಂಧದ ಶಂಕೆ ಕೊನೆಗೆ ರಕ್ತಪಾತಕ್ಕೆ ಕಾರಣವಾದ ಭೀಕರ ಘಟನೆ..

ಅನೈತಿಕ ಸಂಬಂಧ ಶಂಕೆ..! ಪತ್ನಿಯ ಗೆಳೆಯನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತಿ…

ಹುಬ್ಬಳ್ಳಿಯಲ್ಲಿ ಭೀಕರ ಮರ್ಡರ್ : ಅಕ್ರಮ ಸಂಬಂಧ ಅನುಮಾನಕ್ಕೆ ರಕ್ತಪಾತ…

ರಾಜೀ ಪಂಚಾಯತಿ ಫಲಿಸಲಿಲ್ಲ..! ಕೊನೆಗೆ ರಕ್ತದಲ್ಲಿ ಅಂತ್ಯವಾದ ಪ್ರೇಮಕಥೆ

Hubballi ತಾಲೂಕಿನ ಬ್ಯಾಹಟ್ಟಿ ಗ್ರಾಮದ ಶಾಂತಿನಗರ ಪ್ಲಾಟ್‌ನಲ್ಲಿ ನಡೆದಿದೆ. ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಎದುರಾಳಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣ ಸಂಚಲನ ಮೂಡಿಸಿದೆ…

ಹತ್ಯೆಯಾದ ವ್ಯಕ್ತಿಯನ್ನು ಫಕ್ಕೀರಪ್ಪ ಅಲಿಯಾಸ್ ಬಸು ಅಕ್ಕಿವಳ್ಳಿ ಎಂದು ಗುರುತಿಸಲಾಗಿದ್ದು, ಕೊಲೆ ಆರೋಪದಲ್ಲಿ ಅದೇ ಪ್ರದೇಶದ ಪ್ರಕಾಶ ಕರಶೆಟ್ಟಿ ಹೆಸರು ಕೇಳಿಬಂದಿದೆ. ಹಲವು ದಿನಗಳಿಂದ ಆರೋಪಿ ಪ್ರಕಾಶನ ಪತ್ನಿ ಮತ್ತು ಮೃತ ಬಸು ನಡುವಿನ ಸಂಬಂಧದ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಇದೇ ವಿಚಾರಕ್ಕೆ ಇಬ್ಬರ ನಡುವೆ ತೀವ್ರ ವೈಮನಸ್ಸು ಬೆಳೆದಿತ್ತು ಎನ್ನಲಾಗಿದೆ…

ಇದಕ್ಕೂ ಮೊದಲು ಈ ವಿವಾದಕ್ಕೆ ರಾಜೀ ಪಂಚಾಯತಿ ನಡೆದಿದ್ದರೂ, ಸಂಪರ್ಕ ಮುಂದುವರಿದಿದೆ ಎಂಬ ಶಂಕೆ ಪ್ರಕಾಶನ ಕೋಪಕ್ಕೆ ಇನ್ನಷ್ಟು ಎಣ್ಣೆ ಸುರಿದಂತಾಗಿದೆ. ನಿನ್ನೆ ತಡರಾತ್ರಿ ಮಾತಿನ ಚಕಮಕಿ ಏಕಾಏಕಿ ಹಿಂಸಾತ್ಮಕ ತಿರುವು ಪಡೆದು, ಪ್ರಕಾಶ ಕೊಡಲಿಯಿಂದ ಬಸುವಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ…

ಹಲ್ಲೆಯ ತೀವ್ರತೆಗೆ ಬಸುವಿನ ದೇಹ ರಕ್ತದ ಮಡುವಿನಲ್ಲಿ ಬಿದ್ದು ಹೋಗಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ಬಳಿಕ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು…ಮಾಹಿತಿ ತಿಳಿಯುತ್ತಿದ್ದಂತೆಯೇ Hubballi Rural Police Station ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ಸ್ಪೆಕ್ಟರ್ ಮುರಗೇಶ ಚೆನ್ನಣ್ಣನವರ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ…

ಮೃತನ ತಂದೆ ಶೇಖಪ್ಪ ಅಕ್ಕಿವಳ್ಳಿ ಮಾತನಾಡಿ, “ನನ್ನ ಮಗನ ಜೊತೆ ಆರೋಪಿ ಹಾಗೂ ಆತನ ಪತ್ನಿ ಹಣಕಾಸು ವ್ಯವಹಾರ ಮಾಡುತ್ತಿದ್ದರು. ಇತ್ತೀಚೆಗೆ ಇದೇ ವಿಚಾರಕ್ಕೆ ಜಗಳವಾಗಿತ್ತು. ಕೊಲೆಗೆ ಇದೇ ಕಾರಣ ಇರಬಹುದು. ಆದರೆ ಅನೈತಿಕ ಸಂಬಂಧದ ಆರೋಪಗಳ ಬಗ್ಗೆ ನನಗೆ ಮಾಹಿತಿ ಇಲ್ಲ, ಎಂದು ತಿಳಿಸಿದ್ದಾರೆ…

ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿದ್ದು, ಕೊಲೆಯ ನಿಖರ ಕಾರಣ ಬಹಿರಂಗವಾಗಬೇಕಿದೆ.

Share News

About Shaikh BigTv

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *