ಡಾರ್ಲಿಂಗ್ ಪ್ರಭಾಸ್ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. 44 ನೇ ವರ್ಷಕ್ಕೆ ಕಾಲಿಟ್ಟರೂ ಇನ್ನೂ ಸಿಂಗಲ್ ಆಗಿದ್ದಾರೆ. ಪ್ರಭಾಸ್ ಮದುವೆ ಒಂದೇ ಅಭಿಮಾನಿಗಳನ್ನು ಟೆನ್ಷನ್ ಮಾಡ್ತಿದೆ. ಇದೀಗ ಜನಪ್ರಿಯ ಆಂಗ್ಲ ವೆಬ್‌ಸೈಟ್ ಪ್ರಭಾಸ್ ಮದುವೆಯ ಬಗ್ಗೆ ಆಸಕ್ತಿದಾಯಕ ಲೇಖನವೊಂದನ್ನು ಬರೆದಿದೆ. ಮದುವೆಗೆ ಅಡ್ಡಿಯಾಗುತ್ತಿರುವ ಸಮಸ್ಯೆ ಏನೆಂದು ಬಹಿರಂಗಪಡಿಸಿದೆ.
ಪ್ರಭಾಸ್-ಅನುಷ್ಕಾ.. ಹಿಟ್ ಅಂಡ್ ಕ್ಯೂಟ್ ಜೋಡಿ. ಬಿಲ್ಲಾ, ಮಿರ್ಚಿ ಮತ್ತು ಬಾಹುಬಲಿ ಎರಡು ಭಾಗಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಇವರಿಬ್ಬರ ಬಾಂಧವ್ಯ ನೋಡಿದ ಅಭಿಮಾನಿಗಳು ಇಬ್ಬರೂ ಪ್ರೀತಿಯಲ್ಲಿ ಮುಳುಗಿದ್ದಾರೆ ಎಂದಿದ್ದಾರೆ. ಆದರೆ ತಮ್ಮ ನಡುವೆ ಸ್ನೇಹ ಬಿಟ್ಟರೆ ಬೇರೇನೂ ಇಲ್ಲ ಎಂದು ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. ಕೆಲವೊಮ್ಮೆ ನಕ್ಕು ಸುಮ್ಮನಾಗಿದ್ದಾರೆ. ಆದರೆ, ಅವರಿಬ್ಬರೂ 10 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





