ಮಂಡ್ಯ: ಜಿಲ್ಲೆ ಯ ಶಾಸಕ ನಾರಾಯಣಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಮುಖಂಡರಾದ ಬಸ್ ಕೃಷ್ಣೇಗೌಡ ಮತ್ತು ರಾಜಾಹುಲಿ ದಿನೇಶ್ ಅವರ ಕ್ರಮವನ್ನು ಶಾಸಕ ನಾರಾಯಣಗೌಡರ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ.ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕೆ. ಆರ್.ಪೇಟೆಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಸತತವಾಗಿ ನಾರಾಯಣಗೌಡರ ವಿರುದ್ಧ ಹೀನಾಯವಾಗಿ ಸೋತು ಸುಣ್ಣವಾಗಿರುವ ಮಾಜಿಶಾಸಕರನ್ನುಏಕವಚನದಲ್ಲಿ ನಿಂಧಿಸುತ್ತಾ, ಬಾಲಿಷವಾದ ಹೇಳಿಕೆಯನ್ನು ನೀಡುತ್ತಾ ತಾಲ್ಲೂಕಿನ ಪ್ರಬುದ್ಧ ಮತದಾರರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ ಎಂದರು.ಕೆ.ಆರ್.ವಿನೋದ್ ಕುಮಾರ್, ಕೊಮ್ಮೇನಹಳ್ಳಿ ಜಗಧೀಶ್, ಅಘಲಯ ಮಂಜಣ್ಣ, ಹನುಮಂತರಾಜ್, ಪ್ರವೀಣ್ ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ. ಬಸ್ ಕೃಷ್ಣೇಗೌಡ, ದಿನೇಶ್ ಮತ್ತು ವೆಂಕಟಸುಬ್ಬೇಗೌಡ ಅವರು ಪಕ್ಷದ್ರೋಹಿಗಳಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ್ರೋಹದ ಕೆಲಸ ಮಾಡಿ ಮಾಜಿಶಾಸಕ ಚಂದ್ರಶೇಖರ್ ಪರವಾಗಿ ಕೆಲಸ ಮಾಡಿರುವುದು ಜಗಜ್ಜಾಹೀರಾಗಿದೆ. ತಾಲೂಕಿನಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳ ಹಿನ್ನಡೆ, ಅನುದಾನ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಾಸಕ ನಾರಾಯಣಗೌಡರು ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ನಿರ್ಧಾರಕ್ಕೆ ಬಂದಿದ್ದಾರೆ. ಶಾಸಕ ನಾರಾಯಣಗೌಡರು ಕೈಗೊಳ್ಳುವ ಯಾವುದೇ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ್, ವಿಶ್ವನಾಥ, ನಂಜುಂಡ, ದಯಾನಂದ, ಕರ್ತೇನಹಳ್ಳಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





