Breaking News

ಗಾಳಿಮುಖ: ಕಾರನ್ನು ತಡೆದು ಹಲ್ಲೆ

ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮದ ಗಾಳಿಮುಖದಲ್ಲಿ ಪಿಕ್ ಅಪ್ ವಾಹನವನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಆರೋಪಿಗಳಿಬ್ಬರು ಕಾಸರಗೋಡು ಮೂಲದ ಸಹೋದರರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಜೂ. 27ರಂದು ನಡೆಸಿದೆ. ಪಿಕ್ ಅಪ್ ಚಾಲಕ ಹನೀಫ್ ಹಾಗೂ ಪ್ರಯಾಣಿಕ ಮಹಮ್ಮದ್ ನಿಯಾಝ್ ಪ್ರಕರಣದ ಆರೋಪಿಗಳಾಗಿದ್ದು, ಘಟನೆಗೆ ಸಂಬಂಧಿಸಿ ಕಾಸರಗೋಡಿನ ಕಲ್ನಾಡಿನ ಪ್ರಸನ್ನಕುಮಾರ್ ಕೆ.ವಿ.ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಸನ್ನಕುಮಾರ್ ಅವರು ಜೂ. 27ರಂದು ಕಾರಿನಲ್ಲಿ ಮನೆಯವರ ಜತೆ ಸುಬ್ರಹ್ಮಣ್ಯಕ್ಕೆ ಹೋಗಿ ಸಂಜೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಾರು ಗಾಳಿಮುಖಕ್ಕೆ ತಲುಪುತ್ತಿದ್ದಂತೆ ಹಿಂದಿನಿಂದ ಪಿಕ್ ಅಪ್ ವಾಹನವನ್ನು ಜೋರಾಗಿ ಹಾರ್ನ್ ಹಾಕುತ್ತಾ ಕಿರಿದಾದ ರಸ್ತೆಯಲ್ಲಿ ಓವರ್ ಟೇಕ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಪ್ರಸನ್ನ ಅವರು ಪಿಕ್ ಅಪ್ ಚಾಲಕನಿಗೆ ನಿಧಾನವಾಗಿ ಹೋಗುವಂತೆ ಹೇಳಿದಾಗ ಓವರ್ ಟೇಕ್ ಮಾಡಿ ಸ್ವಲ್ಪ ಮುಂದೆ ಹೋಗಿ ಪಿಕ್ ಅಪ್ ವಾಹನವನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಕಾರನ್ನು ತಡೆದಿದ್ದಾನೆ. ಬಳಿಕ ಇಬ್ಬರು ಆರೋಪಿಗಳು ಕಾರಿನ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿದ್ದಾರೆ. ಪ್ರಸನ್ನ ಹಾಗೂ ಅವರ ತಮ್ಮ ಸುಜೀತ್ ಕಾರಿನಿಂದ ಇಳಿದಾಗ ಅವರನ್ನು ದೂಡಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *