ಆಸ್ಪತ್ರೆ ಭಯಕ್ಕೆ ಬಲಿಯಾದ ಜೀವ: ಯೂಟ್ಯೂಬ್ ಹೆರಿಗೆ ಪ್ರಯೋಗ ದುರಂತದಲ್ಲಿ ಮಹಿಳೆ ಸಾವು..!
ತಮಿಳುನಾಡಿನ Tamil Nadu ರಾಜ್ಯದ ತಿರುಪುರ್ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಭಯದಿಂದ 32 ವರ್ಷದ ಮಹಿಳೆಯೊಬ್ಬರು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಮನೆಯಲ್ಲೇ ಹೆರಿಗೆ ಮಾಡಿಕೊಳ್ಳಲು ಯತ್ನಿಸಿದ್ದು, ಬಳಿಕ ಉಂಟಾದ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ…
ಮೃತ ಮಹಿಳೆಯನ್ನು ಕೆ. ಶಶಿಕಲಾ ಎಂದು ಗುರುತಿಸಲಾಗಿದೆ. ಜೂನ್ 24ರ ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಾಗ, ಪತಿ ಮತ್ತು ಅತ್ತೆ ಸೇರಿ ಯೂಟ್ಯೂಬ್‌ನಲ್ಲಿ ನೈಸರ್ಗಿಕ ಹೆರಿಗೆಯ ವಿಡಿಯೋಗಳನ್ನು ನೋಡಿ ಮನೆಯಲ್ಲೇ ಹೆರಿಗೆ ಮಾಡಿಸಲು ಮುಂದಾಗಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಕ್ಷಣಗಳಲ್ಲಿ ಶಶಿಕಲಾ ಅವರ ಆರೋಗ್ಯ ಹದಗೆಟ್ಟು ತೀವ್ರ ರಕ್ತಸ್ರಾವ ಆರಂಭವಾಯಿತು…
ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಅವರನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ, ಬಳಿಕ Coimbatore ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಅವರು ಕೊನೆಯುಸಿರೆಳೆದರು..

ಘಟನೆ ಸಂಬಂಧ ವೈದ್ಯಕೀಯ ಅಧಿಕಾರಿಗಳ ದೂರಿನ ಮೇರೆಗೆ ಮಹಿಳೆಯ ಪತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮಹಿಳೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ನಿರಾಕರಿಸಿದ್ದರೆಂದು ತಿಳಿದುಬಂದಿದೆ…
ಈ ದುರಂತ ಮತ್ತೊಮ್ಮೆ ಗರ್ಭಿಣಿಯರು ವೈದ್ಯಕೀಯ ತಪಾಸಣೆ ಮತ್ತು ಸುರಕ್ಷಿತ ಹೆರಿಗೆ ಸೇವೆಗಳ ಮಹತ್ವವನ್ನು ನೆನಪಿಸಿದೆ. ಯೂಟ್ಯೂಬ್ ಅಥವಾ ಸಾಮಾಜಿಕ ಜಾಲತಾಣದ ಮಾಹಿತಿಯನ್ನು ನಂಬಿ ಜೀವದ ಜೊತೆ ಆಟವಾಡಬಾರದು ಎಂಬ ಎಚ್ಚರಿಕೆಯನ್ನೂ ಈ ಘಟನೆ ನೀಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

