Breaking News

ಮೇಕೆ ಮಾಂಸದಲ್ಲಿ ಎಮ್ಮೆ ಮಾಂಸ ಬೆರೆಸಿ ಹೋಟೆಲ್ ಗಳಿಗೆ ಪೂರೈಕೆ : ಆಘಾತಕಾರಿ ವಿಡಿಯೋ ವೈರಲ್

ಹೈದರಾಬಾದ್: ನಗರದ ಎರಡು ಕಡೆ ನಡೆದ ದಾಳಿಯಲ್ಲಿ ಕಲಬೆರಕೆ ಮಾಂಸ ಹಾಗೂ ರಾಸಾಯನಿಕ ಬಳಸಿ ಸಂಸ್ಕರಿಸಿದ ಕೊಳೆತ ಮೀನು ಮಾರಾಟ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಹಬೀಬ್‌ನಗರದಲ್ಲಿ ಮೇಕೆ ಮಾಂಸದ ಹೆಸರಲ್ಲಿ ಎಮ್ಮೆ ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನಿಂದ 50 ಕೆಜಿ ಕಲಬೆರಕೆ ಮಾಂಸವನ್ನು ಜಪ್ತಿ ಮಾಡಿ ಪರೀಕ್ಷೆಗೆ ಕಳುಹಿಸಲಾಗಿದೆ. ಮಂಗಳಹಾಟ್‌ನಲ್ಲಿ ಕೊಳೆತ ಮೀನು ಮತ್ತು ಸೀಗಡಿಗೆ ರಾಸಾಯನಿಕ ಬಳಸಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದು, 262 ಕೆಜಿ ಕೊಳೆತ ಮೀನು-ಸೀಗಡಿ ಸೇರಿದಂತೆ ರಾಸಾಯನಿಕ ಪುಡಿ ಮತ್ತು ಇತರೆ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Share News

About BigTv News

Check Also

ಕೊಲ್ಲೂರಿನಲ್ಲಿ 80 ಸಾವಿರ ರೂ. ಕಳವು: 24 ಗಂಟೆಯೊಳಗೆ ಮೂವರು ಕಳ್ಳಿಯರ ಬಂಧನ

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯ ವ್ಯಾನಿಟಿ ಬ್ಯಾಗ್‌ನಿಂದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಕೊಲ್ಲೂರು …

Leave a Reply

Your email address will not be published. Required fields are marked *