ಪಂಜಾಬ್‌ನ ತರಣ್ ತರಣ್‌ನಲ್ಲಿ ಪತ್ನಿಯನ್ನು ತವರು ಮನೆಯಿಂದ ಕರೆತರಲು ಬಂದಿದ್ದ ಲವ್‌ಜೀತ್ ಸಿಂಗ್ ಮೇಲೆ ಪತ್ನಿಯ ಸಹೋದರ ಸಜನ್ ಸಿಂಗ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಲವ್‌ಜೀತ್ ಅವರನ್ನು ರಕ್ಷಿಸಲು ಮುಂದಾದ ಗುರ್ಜಿತ್ ಕೌರ್ ಅವರಿಗೂ ಬೆಂಕಿ ತಗುಲಿ ಗಂಭೀರ ಗಾಯಗಳಾಗಿದ್ದು, ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಜನ್ ಸಿಂಗ್ ಹಾಗೂ ಸಂದೀಪ್ ಕೌರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

