ಹುಬ್ಬಳ್ಳಿ: ಅವಳಿ ನಗರಕ್ಕೆ ಬಂತು ಭಾರತ್ ಬ್ರಾಂಡ್ ಕಡಿಮೆ ಬೆಲೆಯಲ್ಲಿ ಪದಾರ್ಥಗಳ ವಿತರಣೆ ಮಾಡಲಾಗಿತ್ತಿದೆ.ದೀಪಾವಳಿಯ ಉಡುಗೊರೆಯಾಗಿ “ಭಾರತ್ ಬ್ರಾಂಡ್” ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಜನತೆಗೆ ಉಡುಗೊರೆ ನೀಡುತ್ತಿರುವ ಕೇಂದ್ರ ಸರ್ಕಾರ. ಹುಬ್ಬಳ್ಳಿ-ಧಾರವಾಡ ಅವಳಿನಗರದ ಜನತೆಗೆ ಬಂಪರ್ ಆಫರ್ ನೀಡಿದ್ದಾರೆ.
ಪದಾರ್ಥಗಳನ್ನು ಮನೆ ಮನೆಗೆ ತಲುಪಿಸುವ ಹೊಸ ಯೋಜನೆ ಹಾಕಿದ್ದಾರೆ.ಕಡಿಮೆ ಬೆಲೆಯಲ್ಲಿ ಈರುಳ್ಳಿ ತಲುಪಿಸುವ ಉದ್ದೇಶದ ಯೋಜನೆಯಲ್ಲಿದೆ.ಮೂರು ಸಂಚಾರಿ ವಾಹನಗಳಲ್ಲಿ ಜನರಿಗೆ ಪದಾರ್ಥಗಳ ಮಾರಾಟ ಮಾಡಲಾಗುತ್ತಿದೆ.
₹80 ಇರುವ ಈರುಳ್ಳಿ ಭಾರತ್ ಬ್ರಾಂಡ್ ಸಂಚಾರಿ ವಾಹನದಲ್ಲಿ ₹25 ಆಗಿದೆ. ₹120 ಕಡಲೆ ಬೇಳೆ ಸಂಚಾರಿ ವಾಹನದಲ್ಲಿ ₹60 ಕ್ಕೆ ಮಾರಾಟ ಮಾಡುಲಾಗುತ್ತಿದೆ.
ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಅವಳಿನಗರದ ಜನರಿಗೆ ಮಾರಾಟ ಮಾಡುತ್ತಿದ್ದಾರೆ.ಹಬ್ಬದ ಶುಭ ಸಂದರ್ಭದಲ್ಲಿ ಜನರಿಗೆ ಅತೀ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದು ವಿಶೇಷ.
ದಿನನಿತ್ಯ ಬಳಕೆಯ ಸಾಮಾಗ್ರಿಗಳನ್ನು ಒದಗಿಸುವ ವಿನೂತನ ಯೋಜನೆ,ಜನತೆ ಇದನ್ನು ಸದುಪಯೋಗ ಪಡಿಸಿಕೊಳ್ಳಲಿ ಎಂದುಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಾಮಾಜಿಕ ಪೋಸ್ಟ್ ಮಾಡಿದ್ದಾರೆ.ಯೋಜನೆ ಜಾರಿಗೆ ತಂದ ಪ್ರಧಾನಿಗೆ ಪೋಸ್ಟ್ ಮೂಲಕ ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ
bigtvnews | Hubli Dharwad News | Kannada News | Karnataka News Hubli News | News In Hubli | Local news





